ಇಂಡಿ ತಾಲೂಕಿನ ಗುಬ್ಬೇವಾಡದ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ನಡೆದ ಅಗ್ನಿ ಹಾಯುವ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ ಅವರ ಭಾವಚಿತ್ರ ಹೊತ್ತು ಅಗ್ನಿ ಪ್ರವೇಶಿಸಿದ ಅಭಿಮಾನಿಗಳು. ಅಭಿಮಾನಿಗಳಾದ ಆನಂದ ಚಂದಕವಟೆ, ಅನಿಲ ಉಪ್ಪಿನ, ವಿಜಯಕುಮಾರ ದೊಳೆ ಇತರರಿದ್ದರು. 
ಜಿಲ್ಲೆ

ಬಸನಗೌಡ ಭಾವಚಿತ್ರ ಹೊತ್ತು ಅಗ್ನಿ ಪ್ರವೇಶಿಸಿದ ಅಭಿಮಾನಿಗಳು

Vijayapura - Desk - Gurappa Lokuri

ಇಂಡಿ: ತಾಲೂಕಿನ ಗುಬ್ಬೇವಾಡ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಅವರ ಭಾವಚಿತ್ರ ಹೊತ್ತು ಅಭಿಮಾನಿಗಳು ಅಗ್ನಿ ಪ್ರವೇಶ ಮಾಡಿದರು.

ಮೊದಲು ದೇವರ ಪಲ್ಲಕ್ಕಿ ಅಗ್ನಿ ಪ್ರವೇಶಿಸಿದ ಬಳಿಕ ಮಲ್ಲಯ್ಯನ ಕಂಬಿ ಸಾಗಿತು. ಆನಂತರ ಎಂಟು ಜನರು ಬಸನಗೌಡ ಪಾಟೀಲ ಅವರ ಭಾವಚಿತ್ರ ಹೊತ್ತು ಅಗ್ನಿ ಪ್ರವೇಶಿಸಿದರು.

ಅಗ್ನಿ ಪ್ರವೇಶ ಮಾಡುವ ವೇಳೆ ಬಸನಗೌಡ ಪಾಟೀಲ ಅವರು ಮುಂದಿನ ಮುಖ್ಯಮಂತ್ರಿಯಾಗಲಿ, ಬಸನಗೌಡರಿಗೆ ಜಯವಾಗಲಿ ಸೇರಿ ವಿವಿಧ ಘೋಷಣೆಗಳನ್ನು ಮೊಳಗಿಸಿದರು.

ಅಭಿಮಾನಿಗಳಾದ ಆನಂದ ಚಂದಕವಟೆ, ಅನಿಲ ಉಪ್ಪಿನ, ವಿಜಯಕುಮಾರ ದೊಳೆ, ಸಿದ್ದರಾಮ ಉಕ್ಕಲಿ, ರಮೇಶ ಮರಗೂರ ಸೇರಿ ಮತ್ತಿತರರು ಅಗ್ನಿ ಪ್ರವೇಶಿಸಿದರು.