ಬಾದಾಮಿಯಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲರ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ ನಡೆಯಿತು. 
ಜಿಲ್ಲೆ

ಶುಭಾಶಯ ಕೋರಿದ ಅಭಿಮಾನಿಗಳು, ಕಾರ್ಯಕರ್ತರು

Vijayapura - Desk - Gurappa Lokuri

ಬಾದಾಮಿ: ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರ 53ನೇ ಜನ್ಮದಿನದ ಅಂಗವಾಗಿ ಮಂಗಳವಾರ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ತಾಲೂಕಿನ ಜಾಲಿಹಾಳ ಗ್ರಾಮದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು.

ನಗರದ ಶ್ರೀ ಕುಮಾರೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅಭಿಮಾನಿಗಳು ರಕ್ತದಾನ ಮಾಡಿದರು. ನಂತರ ಸಂಜೆ ಪಿಕೆ ಮೆಲೋಡಿಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಸರಿಗಮಪ ಲಿಟಲ್ ಚಾಂಪದ ದಿಯಾ ಹೆಗಡೆ ಮತ್ತು ಪುಂಡಲಿಕ್ ಲಮಾಣಿ ನೇತೃತ್ವದ ಕಲಾವಿದರ ತಂಡ ಸುಶ್ರಾವ್ಯವಾಗಿ ಸಂಗೀತ ಸೇವೆ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಶ್ರೀ ಕಾಶಿನಾಥ ಸ್ವಾಮಿಗಳು, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಎಫ್. ಆರ್. ಪಾಟೀಲ, ತಾಲೂಕು ಅಧ್ಯಕ್ಷ ಶಿವನಗೌಡ ಸುಂಕದ, ನಾಗರಾಜ ಕಾಚಟ್ಟಿ, ಮುತ್ತು ಕಾಚಟ್ಟಿ, ಮುತ್ತು ಉಳ್ಳಾಗಡ್ಡಿ, ಬಾಲಣ್ಣವರ, ಶೇಖರಗೌಡ ಪಾಟೀಲ, ಹನುಮಂತ ಪೂಜಾರ, ಕೆಂಚನಗೌಡ ಸೇರಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.