ಜಿಲ್ಲೆ

ನವದುರ್ಗೆಯರಾಗಿ ಕಂಗೊಳಿಸಿದ ಮಕ್ಕಳು

ಎ. ಆರ್. ರಘುರಾಮ
  • ಮದ್ದೂರು: ನವರಾತ್ರಿ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ದುರ್ಗಿಯರ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
    ಸಮಾಜ ಸೇವಕ ಪ್ರಣಾಮ್ ಸತೀಶ್ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ದೇವತೆಯರನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ಶ್ರದ್ಧಾಭಕ್ತಿಯಿಂದ ನವರಾತ್ರಿ ಆಚರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು. ಮಕ್ಕಳು ನವದುರ್ಗೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಹಿ, ಇಂದ್ರಾಣಿ, ಚಾಮುಂಡಿ, ಮಹಾಲಕ್ಷ್ಮೀ ಹಾಗೂ ರಾಜೇಶ್ವರಿ ದೇವಿಯರ ವೇಷಧರಿಸಿ ಗಮನ ಸೆಳೆದರು. ವೇಷ-ಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಸಿಹಿ ವಿತರಿಸಲಾಯಿತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಸಮಾಜ ಸೇವಕ ಪ್ರಣಾಮ್ ಸತೀಶ್, ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ರಾವ್, ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸತ್ಯನಾರಾಯಣರಾವ್, ಶಂಕರ ಸಭಾದ ಅಧ್ಯಕ್ಷ ಗುರುಸ್ವಾಮಿ, ಸದಸ್ಯರಾದ ಎಂ.ಎಸ್.ಶಿವರಾಮು, ರಾಮಲಿಂಗಯ್ಯ, ಎಂ.ಎಸ್.ಸುನಿಲ್‌ಕುಮಾರ್, ನೈದಿಲೆ ಚಂದ್ರು ಇದ್ದರು.