ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್ ತರಕಾರಿ ವಿತರಿಸಿದರು. 
ಜಿಲ್ಲೆ

ಕುಟುಂಬದ ಉಳಿವಿಗಾಗಿ ಎಲ್ಲರೂ ನಿಯಮ ಪಾಲಿಸಿ - ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್ ಸಲಹೆ

ಕುಕನೂರು: ಸೀಲ್‌ಡೌನ್‌ನ್ನು ಆರೋಗ್ಯದ ಹಿತ ದೃಷ್ಟಿಯಿಂದ ಉತ್ತಮ ಕ್ರಮವಾಗಿದ್ದು, ಯಾರೊಬ್ಬರೂ ಈ ಬಗ್ಗೆ ಭಯಭೀತರಾಗಬಾರದು ಎಂದು ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್ ಧೈರ್ಯ ಹೇಳಿದರು.

ತಾಲೂಕಿನ ಬಳಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿರುವ ಏರಿಯಾದ 65 ಮನೆಗಳಿಗೆ ತರಕಾರಿ ವಿತರಿಸಿ ಮಾತನಾಡಿದರು. ಕರೊನಾ ಎಂಬುದು ಮಹಾಮಾರಿ. ಅದರ ಸೋಂಕು ಯಾರಿಗೂ ತಾಕದಿರಲಿ. ನಾವು ಸೀಲ್‌ಡೌನ್ ದಿನಗಳನ್ನು ಜಯಿಸಬೇಕು. ನೊಂದುಕೊಳ್ಳದೆ ಎಲ್ಲರ ಆರೋಗ್ಯದ ಹಿತದೃಷ್ಟಿ ಹಾಗೂ ಕುಟುಂಬದ ಉಳಿವಿಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೀಲ್‌ಡೌನ್ ದಿನಗಳಲ್ಲಿ ಉಂಟಾಗುವ ಕಷ್ಟಗಳಿಗೆ ಸ್ಪಂದಿಸಲು ನಾನು ಸಹಕಾರ ನೀಡುವೆ ಎಂದು ಭರವಸೆ ತುಂಬಿದರು. ತಾಪಂ ಸದಸ್ಯ ರಾಮಣ್ಣ ಹೊಸಮನಿ, ಪ್ರಮುಖರಾದ ಚನ್ನಪ್ಪ ಗೌಡ್ರು, ಬಸವರಾಜ ಸುರ್ವೇ, ಲಕ್ಷ್ಮಣ ತಳವಾರ ಇತರರಿದ್ದರು.