ಜಿಲ್ಲೆ

ಪತ್ನಿ ಮಗನನ್ನು ಬ್ರಿಜ್ ನಿಂದ ದೂಡಿ, ತಾನೂ ನೇಣು ಹಾಕಿಕೊಂಡ

Uttara Kannada - Subash Hegde

ಕಾರವಾರ:ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನಲ್ಲಿ ಗುರುವಾರ ನಡೆದಿದೆ.
ಗೋಪಶಿಟ್ಟಾದ ಶ್ಯಾಮ ಪಾಟೀಲ (40) ಅವರ ಪತ್ನಿ ಜ್ಯೋತಿ(35) ಹಾಗೂ ಮಗ ಧಕ್ಷ (12) ಮೃತರು.

ಶ್ಯಾಮ ಪಾಟೀಲ ದೇಹ ಗೋವಾದ ಕುಕಳ್ಳಿ ಪಾಡಿ ಎಂಬಲ್ಲಿ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗ ಹಾಗೂ ತಾಯಿಯ ದೇಹ ದೇವಬಾಗ ಕಡಲ ತೀರದಲ್ಲಿ ಪತ್ತೆಯಾಗಿದೆ.
ಪತ್ನಿ ಹಾಗೂ ಮಗನನ್ನು ಕಾರವಾರ ಕೋಡಿಬಾಗ ಬ್ರಿಜ್ ಮೇಲಿಂದ ದೂಡಿದ ಶ್ಯಾಮ ಪಾಟೀಲ್ ಗೋವಾದಲ್ಲಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಶ್ಯಾಮ ಪಾಟೀಲ್ ಗೋವಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ಹೊಂದಿದ್ದರು. ಆದರೆ, ಆತ್ಮೀಯರಿಂದ ಮೋಸಕ್ಕೆ ಒಳಗಾಗಿದ್ದರು. ಸುಮಾರು 2 ಕೋಟಿ ರೂ. ಸಾಲ ಇತ್ತು ಎನ್ನಲಾಗಿದೆ.

ತಾಯಿ ಮಗನ ಸಾವಿನ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ಯಾಮ ಪಾಟೀಲ ಸಾವಿನ ಸಂಬಂಧ ಗೋವಾ ಕುಕಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.