ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ, ರೋಟರಿ ಅಧ್ಯಕ್ಷ ಅನಿಲ್ ಸುವರ್ಣ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ್ ನಾರಿ, ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಮತ್ತಿತರರು ಇದ್ದರು 
ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ಸಂಸ್ಥೆ ಸಹಕಾರ

ಇಂದಿರಾ ಎನ್ ಕೆ

ಕೋಟ: ರೋಟರಿಯಂತಹ ಸಮಾಜ ಸೇವಾ ಸಂಸ್ಥೆ ಸಮಾಜದಲ್ಲಿ ನೊಂದವರ, ಅಶ್ತಕರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಸಮಾಜದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮಾಡಿದ ದಾನ ಸಾರ್ಥಕವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಹೇಳಿದರು.

ರೋಟರಿ ಕ್ಲಬ್ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಆಶ್ರಯದಲ್ಲಿ ಇತ್ತೀಚೆಗೆ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಅಧ್ಯಕ್ಷ ಅನಿಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಆ್ಯನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ್ ನಾರಿ, ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ಜೋನಲ್ ಲೆಫ್ಟಿನೆಂಟ್ ನಿತ್ಯಾನಂದ ನಾರಿ ಶುಭ ಹಾರೈಸಿದರು. ಸಭಾಪತಿ ಶ್ಯಾಮಸುಂದರ್ ನಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಸದಸ್ಯ ಯುವ ಉದ್ಯಮಿ ಭಾಸ್ಕರ್ ಪೂಜಾರಿ ಅವರನ್ನು ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್ ಮೆಂಬರ್‌ಶಿಪ್ ಚೇರ್‌ಮನ್ ಸತೀಶ್ ಶೆಟ್ಟಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಆಚಾರ್ ದಂಪತಿ ಇದ್ದರು. ಮಾಜಿ ಅಧ್ಯಕ್ಷ ದಯಾನಂದ ಆಚಾರ್, ಕೃಷ್ಣ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು.

ಆ್ಯನ್ಸ್ ಸದಸ್ಯೆ ನಂದಿನಿ ಪ್ರಾರ್ಥಿಸಿ, ಕ್ಲಬ್ ಕಾರ್ಯದರ್ಶಿ ಪ್ರಾಕಾಶ್ ಪೂಜಾರಿ ವರದಿ ವಾಚಿಸಿದರು. ಮಾಜಿ ಅಧ್ಯಕ್ಷ ಸುರೇಶ್ ಆಚಾರ್ ಸ್ವಾಗತಿಸಿ, ಆ್ಯನ್ಸ್ ಕಾರ್ಯದರ್ಶಿ ಶಶಿಕಲಾ ಗಣೇಶ್ ವಂದಿಸಿದರು. ಸುನೀಲ್ ಕಾರ್ಯಕ್ರಮ ನಿರೂಪಿಸಿದರು.