ಜಿಲ್ಲೆ

ಕುಟುಂಬವೊಂದರ ಫೋಟೊಗೆ ಅಶ್ಲೀಲ ಪದ ಬಳಿಸಿ ಫೆಸ್‌ಬುಕ್‌ನಲ್ಲಿ ಪೋಸ್ಟ್; ಪ್ರಕರಣ ದಾಖಲು

Haveri - Kariyappa Aralikatti

ಹಾವೇರಿ: ಅಶ್ಲೀಲ ಪದಗಳನ್ನು ಬರೆದು ವ್ಯಕ್ತಿಯೊಬ್ಬನ ಕುಟುಂಬದ ಫೋಟೊ ಅಂಟಿಸಿ ಫೆಸ್‌ಬುಕ್‌ನಲ್ಲಿ ಹರಿಬಿಟ್ಟ ಪ್ರಕರಣದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಅಮೀರಖಾನ್ ಪಾಟೀಲ ಹಾಗೂ ಅನುಪ ವರ್ಣೇಕರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈ ಇಬ್ಬರ ಹೆಸರಿನ ಫೆಸ್‌ಬುಕ್ ಖಾತೆಯಿಂದ ಶಿಗ್ಗಾಂವಿ ತಾಲೂಕಿನ ತಡಸ ಪಟ್ಟಣದ ವ್ಯಕ್ತಿಯೊಬ್ಬನ ಕುಟುಂಬದ ಫೋಟೋ ಎಡಿಟ್ ಮಾಡಿ ಅದಕ್ಕೆ ಅಶ್ಲೀಲ ಪದಗಳನ್ನು ಬರೆದು ಫೆಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನೊಂದ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.