ಬೆಳಗಾವಿ: ಕರೊನಾ ಸೋಂಕು ಹರಡದಂತೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ರಕ್ಷಿಸಲು ಮನೆಯಲ್ಲಿಯೇ ಇರಬೇಕು ಎಂದು ಶಶಿ ಸಿದ್ನಾಳ ಫೌಂಡೇಷನ್ ಅಧ್ಯಕ್ಷ, ಯುವ ಉದ್ಯಮಿ ದಿಗ್ವಿಜಯ ಸಿದ್ನಾಳ ಹೇಳಿದ್ದಾರೆ.
ಬೈಲಹೊಂಗಲ ತಾಲೂಕಿನ ಚಿವಟಗುಂಡಿ, ಸಾಣಿಕೊಪ್ಪ ಗ್ರಾಮಸ್ಥರಿಗೆ ಹಾಗೂ ಬೈಲಹೊಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಉತ್ತಮ ಗುಣಮಟ್ಟದ ಮರು ಬಳಕೆ ಮಾಡಬಹುದಾದ 2,000 ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು. ದೇಶವನ್ನು ಕರೊನಾ ಸೋಂಕಿನಿಂದ ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಮಾಧ್ಯಮ ಮಿತ್ರರು, ಅಧಿಕಾರಿಗಳು ಶ್ರಮಿಸುತ್ತಿದ್ದು ಅವರೊಂದಿಗೆ ಕೈಜೋಡಿಸಬೇಕು. ಸಂಘ, ಸಂಸ್ಥೆಗಳು, ದಾನಿಗಳು ಬಡ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು. ಪಾರ್ಲೆ ಎಕ್ಸಿಕೇಟಿವ್ ಸರ್ಬನ್ ಬಿಸ್ವಾಸ್, ಗ್ರಾಪಂ ಅಧ್ಯಕ್ಷ ಸಂಗಪ್ಪ ಚನಣ್ಣವರ, ಉಪಾಧ್ಯಕ್ಷೆ ಮಾಲಾತಾಯಿ ಮುರಳೀಧರ ಮಲ್ಲೂರ, ಸದಸ್ಯರಾದ ಗುರು ಮಲ್ಲೂರ, ಮಹಾಂತಯ್ಯ ಹಿರೇಮಠ, ಬಸಯ್ಯ ಹೊಸಮಠ, ಪಿಡಿಒ ಜಿ.ಬಿ.ಹುಬಳಿಕರ, ವಿಠಲ ಸಂಗೊಳ್ಳಿ, ಪ್ರವೀಣ ಬೆಳಿಕಟ್ಟಿ ಇತರರು ಇದ್ದರು.