ಜಿಲ್ಲೆ

ಅತಂತ್ರದಿಂದ ಸ್ವತಂತ್ರದತ್ತ ಕುಟುಂಬಗಳು

ಬಸವರಾಜ ವೀರಪ್ಪ ಗರಗ

ಹಾನಗಲ್ಲ: ತಾಲೂಕಿನಾದ್ಯಂತ ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಕುಟುಂಬಗಳು ಇದೀಗ ಸ್ವತಂತ್ರ ಕಡೆಗೆ ವಾಲುತ್ತಿವೆ. ಯಾವೊಂದು ಕುಟುಂಬವೂ ಬೀದಿಪಾಲಾಗದಂತೆ ರಕ್ಷಿಸುವ ಜವಾಬ್ದಾರಿ ಹೊತ್ತುಕೊಂಡಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲವರಕೊಪ್ಪ ಮತ್ತು ಉಪ್ಪುಣಸಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಕನಿಷ್ಠ 8-10 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಸಂಪೂರ್ಣ ಉಚಿತವಾಗಿ ಅಳಿಸಲಾಗದ ದಾಖಲೆಗಳೊಂದಿಗೆ ನೀಡಲಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಲ್ಲಿ ಸಂತಸ ಕಾಣುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸರ್ಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳ ಲಾಭ ಪಡೆಯುವಲ್ಲಿ ಹಾನಗಲ್ಲ ತಾಲೂಕು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ 30 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದ್ದರೆ, ಅದರಲ್ಲಿ 13 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಹಾನಗಲ್ಲ ತಾಲೂಕಿಗೆ ಸೇರಿದ್ದಾರೆ. ಜಿಲ್ಲೆಯಲ್ಲಿ 350 ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳನ್ನು ರಚಿಸುತ್ತಿದ್ದರೆ ಇದರಲ್ಲಿ 150ಕ್ಕೂ ಹೆಚ್ಚು ಹಾನಗಲ್ಲ ತಾಲೂಕಿಗೆ ಸೇರಿವೆ ಎಂದರು.

ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್, ತಹಸೀಲ್ದಾರ್ ರೇಣುಕಾ ಎಸ್., ಇಒ ಪರಶುರಾಮ ಪೂಜಾರ, ಕೆಲವರಕೊಪ್ಪ ಗ್ರಾಪಂ ಅಧ್ಯಕ್ಷ ಗೋಪಾಲ ಕಾನಮನಿ, ಉಪಾಧ್ಯಕ್ಷೆ ಸುಧಾ ಮ್ಯಾಗಳವರ, ಉಪ್ಪುಣಸಿ ಗ್ರಾಪಂ ಅಧ್ಯಕ್ಷ ಬಾಬಾಜಾನ್ ಬಂಕಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕರಿಯಪ್ಪ ಗಂಟೇರ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಫಕೀರಪ್ಪ ಮುಂಡರಗಿ, ಲಕ್ಕಪ್ಪ ಗಂಟೇರ, ಬಂಗಾರಪ್ಪ ಹರಿಜನ, ಸಿದ್ದಣ್ಣ ಕಾಡಪ್ಪನವರ, ಶಾಂತಪ್ಪ ಬಡೆಣ್ಣನವರ, ಸಿದ್ದು ವಡ್ಡರ, ವನಜಾಕ್ಷಿ ಮಾಳಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಸುಭಾಸ ಗೊರಣ್ಣನವರ, ಬಸವರಾಜ ಮಾಳಣ್ಣನವರ, ವಿಜಯಕುಮಾರ ದೊಡ್ಡಮನಿ, ಪುಟ್ಟಪ್ಪ ನರೇಗಲ್, ಟಾಕನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಖ್ವಾಜಾಮೊಹಿದ್ದೀನ್ ಜಮಾದಾರ, ಮಹದೇವಪ್ಪ ಬಾಗಸರ, ಚಂದ್ರಪ್ಪ ಜಾಲಗಾರ, ಕೊಟ್ರಪ್ಪ ಕುದರಿಸಿದ್ದನವರ ಇತರರಿದ್ದರು.