ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಮರವೊಂದು ಮನೆ ಮೇಲೆ ಉರುಳಿ ಬಿದ್ದಿರುವುದು. 
ಜಿಲ್ಲೆ

ಮನೆ ಮೇಲೆ ಉರುಳಿ ಬಿದ್ದ ಮರ

ರುದ್ರಪ್ಪ ವಾಲಿ

ಕೂಡ್ಲಿಗಿ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರಾತ್ರಿ ಒಂದು ಘಂಟೆ ಸುಮಾರಿಗೆ ಗುಡುಗು, ಸಿಡಿಲಿನಿಂದ ಆರಂಭವಾದ ಮಳೆ ಬೆಳಗಿನ ವರೆಗೂ ಸುರಿಯಿತು. ಮಳೆ, ಗಾಳಿಯಿಂದ ತಾಲೂಕಿನ ಕೆಲವು ಕಡೆ ಎಲೆ ತೋಟಗಳಿಗೆ ಹಾನಿಯಾಗಿದೆ.

ತಾಲೂಕಿನ ಜುಮ್ಮೋಬಹಳ್ಳಿಯಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದ್ದು, ಮನೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಏನು ಅಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.