ಜಿಲ್ಲೆ

ಮರ ಬಿದ್ದು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಸೌಮ್ಯ ಆರ್

ಮೂಲ್ಕಿ: ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ಭಾರಿ ಗಾತ್ರದ ಮರ ಹೆದ್ದಾರಿಗೆ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸಂಜೆ ಬೀಸಿದ ಭಾರಿ ಗಾಳಿಗೆ ಮರ ಹೆದ್ದಾರಿಗೆ ಬಿದ್ದಿದೆ. ಈ ಸಂದರ್ಭ ಸ್ಥಳೀಯರಾದ ರಂಜನ್ ಬಿ.ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ರಫೀಕ್ ಮೂಲ್ಕಿ, ಹರೀಶ್ ಕೋಟ್ಯಾನ್ ಕಿಲ್ಪಾಡಿ, ಪ್ರವೀಣ್ ಕುಬೆವೂರು, ಸ್ವಸ್ತಿಕ್ ಆರ್.ಶೆಟ್ಟಿ, ಯತೀಶ್ ಕೊಲಕಾಡಿ, ತಾರಾನಾಥ ಅಂಗರಗುಡ್ಡೆ ಮತ್ತಿತರರು ಕಿಲ್ಪಾಡಿ ಪಂಚಾಯಿತಿ ಸಹಕಾರದೊಂದಿಗೆ ಮರ ತೆರವುಗೊಳಿಸಲಾಯಿತು.

ಈ ಭಾಗದಲ್ಲಿ ಅನೇಕ ಮರಗಳು ಬೀಳುವ ಸ್ಥಿತಿಯಲ್ಲಿದ್ದು ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.