ಜಿಲ್ಲೆ

ಬೈಕ್​ನಿಂದ ಬಿದ್ದು ಸವಾರ ಸಾವು

Haveri - Kariyappa Aralikatti

ಹಾವೇರಿ: ಬೈಕ್​ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಕ್ರಾಸ್​ ಬಳಿ ಭಾನುವಾರ ನಡೆದಿದೆ.

ನಗರದ ಕೊರಗರ ಓಣಿಯ ನಿವಾಸಿ ದೇವರಾಜ ಶಾಂತಪ್ಪ ಭಜಂತ್ರಿ (23) ಮೃತ ಯುವಕ.

ಈತ ಬೈಕ್​ ಮೇಲೆ ಹಾವೇರಿಯಿಂದ ಗುತ್ತಲಕ್ಕೆ ತೆರಳುತ್ತಿದ್ದ ಸಮಯದಲ್ಲಿ ತಿಮ್ಮೇನಹಳ್ಳಿ ಕ್ರಾಸ್​ ಬಳಿ ಬೈಕ್​ ಬ್ಯಾಲೆನ್ಸ್​ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.