ಜಿಲ್ಲೆ

ಬನ್ನೇರುಘಟ್ಟ ಉದ್ಯಾನಕ್ಕೆ ೇಕ್ ವೆಬ್‌ಸೈಟ್!

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ಸಂಗ್ರಹಾಲಯ, ಸಫಾರಿ, ಮತ್ತು ಚಿಟ್ಟೆ ಉದ್ಯಾನವನಕ್ಕೆ ಟಿಕೇಟ್ ಬುಕಿಂಗ್ ಸೇವೆಗಳನ್ನು ನೀಡುವುದಾಗಿ ಕೆಲವು ಅನಧಿಕೃತ ವೆಬ್ಸೈಟ್‌ಗಳು ಸೃಷ್ಟಿಯಾಗಿವೆ ಎನ್ನಲಾಗಿದ್ದು ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕೃತ ವೆಬ್ಸೈಟ್ bannerughattabiopark.org.

ಇದಾಗಿದ್ದು, ಈ ವೆಬ್ಸೈಟ್ ಮೂಲಕವೇ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅನಧಿಕೃತ ಅಥವಾ ನಕಲಿ ವೆಬ್ಸೈಟ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಆರ್ಥಿಕ ನಷ್ಟ, ವೈಯಕ್ತಿಕ ಡೇಟಾ ಕಳ್ಳತನ ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಅನಧಿಕೃತ ವೆಬ್ಸೈಟ್‌ನ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ಯಾನವನದ ಆಡಳಿತ ಮಂಡಳಿ ಮುಂದಾಗಿದೆ. ಯಾವುದೇ ಪಾವತಿಗಳನ್ನು ಮಾಡುವ ಮೊದಲು ಯಾವಾಗಲೂ ಖ್ಕಿಔ

ಅನ್ನು ಎರಡು ಬಾರಿ ಪರಿಶೀಲಿಸಿ, ಯಾವುದೇ ಅನುಮಾನಾಸ್ಪದ ವೆಬ್ಸೈಟ್ ಅಥವಾ ಬುಕಿಂಗ್ ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ. ಅಧಿಕೃತ ವೆಬ್ಸೈಟ್‌ನಿಂದ ಟಿಕೆಟ್ ಬುಕ್ ಮಾಡಿ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ.