ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಫೋಟೊ ಬಳಸಿ, ನಕಲಿ ವಾಟ್ಸಾೃಪ್ ಖಾತೆ ಸೃಷ್ಟಿಸಿ ಹಣ ಕೇಳುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇಂತಹ ಮನವಿಗಳ ಬಗ್ಗೆ ಎಚ್ಚರ ವಹಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
ಆಯುಕ್ತರ ಹತ್ತಿರದ ಒಡನಾಟ ಇರುವವರಿಗೆ ವಾಟ್ಸಾೃಪ್‌ನಲ್ಲಿ ಇಂತಹ ಮೆಸೇಜುಗಳು ಬಂದಿದ್ದವು. ನಾನು ಹಾಸ್ಪಿಟಲ್‌ನಲ್ಲಿದ್ದೇನೆ. ನನ್ನ ಯುಪಿಐ ವಕಿರ್ಂಗ್ ಇಲ್ಲ. ಸ್ವಲ್ಪ ಹಣ ಬೇಕಿತ್ತು. ಕಳಿಸಿದರೆ ಗಂಟೆಯಲ್ಲಿ ಹಿಂತಿರುಗಿಸುತ್ತೇನೆ ಎಂಬುದಾಗಿ ಕಮಿಷನರ್ ಅವರ ಸಹೋದ್ಯೋಗಿ ಒಬ್ಬರಿಗೆ ಮೆಸೇಜು ಬಂದಿತ್ತು. ಈ ಬಗ್ಗೆ ಕಮಿಷನರ್ ಅವರಿಗೆ ತಿಳಿಸಿ ಪರಿಶೀಲಿಸಿದಾಗ ಅದು ನಕಲಿ ಖಾತೆ ಎಂಬುದು ಗಮನಕ್ಕೆ ಬಂದಿದೆ.
ಫೇಕ್ ನಂಬರಲ್ಲಿ ಫೋಟೊ ಹಾಕಿ ಈ ರೀತಿ ಮಾಡಿದ್ದಾರೆ. ರಾಜಸ್ಥಾನ ಮೂಲದ ಭರತ್ ಪುರದವರು ಎನ್ನುವ ಮಾಹಿತಿ ಇದೆ. ಸೈಬರ್ ಠಾಣೆಯಲ್ಲಿ ಕೇಸು ದಾಖಲಿಸಿ ತನಿಖೆ ಮಾಡಿಸುತ್ತೇನೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಕೇಳಲಾಗುತ್ತಿತ್ತು. ಈಗ ವಾಟ್ಸಾೃಪಲ್ಲಿ ಡಿಪಿ ಹಾಕಿ ಸಾರ್ವಜನಿಕರನ್ನು ಮೋಸ ಮಾಡುವ ತಂತ್ರ ನಡೆಯುತ್ತಿದೆ. ಪ್ರತಿ ದಿನ ನೂರಾರು ಮಂದಿ ಇಂತಹ ಮೋಸದಾಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬಳಕೆದಾರರು ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಬಾರದು. ಪರಿಶೀಲನೆ ನಡೆಸಿ ಮುಂದಡಿಯಿಡುವುದು ಅವಶ್ಯವಾಗಿದೆ.