ಜಿಲ್ಲೆ

ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ತೆಗೆದುಕೊಂಡು ವಂಚಿಸಿದ ಖದೀಮರು

Haveri - Kariyappa Aralikatti

ಹಿರೇಕೆರೂರ: ನಕಲಿ ಲಕ್ಷ್ಮೀ ಸರದ ಪದಕ ಕೊಟ್ಟು ಚಿನ್ನದ ಬೆಂಡ್ವಾಲಿಯನ್ನು ತೆಗೆದುಕೊಂಡು ಹೋಗಿ ವೃದ್ಧೆಯೊಬ್ಬರಿಗೆ ಮೋಸ ಮಾಡಿದ ಘಟನೆ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಸರಿಹಳ್ಳಿಯ ನಾಗಮ್ಮ ಶಿವಪ್ಪ ಸಂತೇರ (60) ಎಂಬುವರಿಗೆ ಮೋಸ ಮಾಡಿರುವುದು.
ಇವರು ಊರಿಗೆ ಹೋಗುವ ಸಲುವಾಗಿ ಪಟ್ಟಣದ ಚಾವಡಿ ವೃತ್ತದಲ್ಲಿ ನಿಂತು ಕೊಂಡಾಗ ಯಾರೋ ಇಬ್ಬರು ಅಪರಿಚಿತರು ಬಂದು ನಮ್ಮ ಮಗಳ ಮದುವೆಗೆ ಬೆಂಡ್ವಾಲಿ ಬೇಕಾಗಿದೆ. ನಮ್ಮ ಬಳಿ ಚಿನ್ನದ ಲಕ್ಷ್ಮೀ ಪದಕಗಳಿವೆ. ಅವುಗಳನ್ನು ಈಗ ಮಾರಾಟ ಮಾಡಲು ಹೋದರೆ ಕಡಿಮೆ ಹಣ ಬರುತ್ತದೆ. ಆದ್ದರಿಂದ ಇವುಗಳನ್ನು ತೆಗೆದುಕೊಂಡು ಬೆಂಡ್ವಾಲಿ ಕೊಡಿ ಎಂದು ಕೇಳಿದ್ದಾರೆ. ವೃದ್ಧೆ ನಾಗಮ್ಮ ಚಿನ್ನದ ಆಸೆಗೆ ತಮ್ಮ ಬಳಿಯಿದ್ದ 30 ಸಾವಿರ ರೂ. ಮೌಲ್ಯದ ಬೆಂಡ್ವಾಲಿ ತೆಗೆದುಕೊಟ್ಟಿದ್ದಾರೆ. ಖದೀಮರು ಅವರಿಗೆ ನಕಲಿ ಚಿನ್ನದ ಲಕ್ಷ್ಮೀ ಪದಕ ಕೊಟ್ಟು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.