ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ಡಿಎಚ್‌ಒ ಡಾ. ಶಂಕರ್ ನಾಯ್ಕ ನೇತೃತ್ವದ ತಂಡ ನಕಲಿ ವೈದ್ಯ ಮೊಹಮದ್ ರಫೀಕ್ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದರು. ತಹಸೀಲ್ದಾರ್ ಎಂ.ರೇಣುಕಾ, ಟಿಎಚ್‌ಒ ಡಾ.ಪ್ರದೀಪ್ ಕುಮಾರ್, ಎಎಸ್‌ಐ ಬಸವರಾಜ್ ಇದ್ದರು. 
ಜಿಲ್ಲೆ

ಶಿವಪುರದಲ್ಲಿ ನಕಲಿ ವೈದ್ಯನ ಬಂಧನ : ಡಿಎಚ್‌ಒ ಡಾ. ಶಂಕರ್ ನಾಯ್ಕ ತಂಡದಿಂದ ದಾಳಿ

Gangavati - Desk - Veeresh S Ullagaddi

ಕೂಡ್ಲಿಗಿ: ತಾಲೂಕಿನ ಶಿವಪುರದಲ್ಲಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದ ಮೊಹಮದ್ ರಫೀಕ್ ಮನೆ ಮೇಲೆ ಡಿಎಚ್‌ಒ ಡಾ. ಶಂಕರ್ ನಾಯ್ಕ, ತಹಸೀಲ್ದಾರ್ ಎಂ. ರೇಣುಕಾ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಿದೆ.


ಕರ್ನೂಲ್ ಜಿಲ್ಲೆಯ ಮೊಹಮದ್ ರಫೀಕ್ ಡಾಕ್ಟರೆಂದು ಹೇಳಿಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಖಚಿತ ಮಾಹಿತಿ ಪಡೆದ ಡಿಎಚ್‌ಒ ಡಾ. ಶಂಕರ್ ನಾಯ್ಕ, ತಹಸೀಲ್ದಾರ್ ಎಂ. ರೇಣುಕಾ ನೇತೃತ್ವದ ತಂಡ ಬುಧವಾರ ಮೊಹಮದ್ ರಫೀಕ್ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ.

ಸ್ಟೇಥೋಸ್ಕೋಪ್, ಸಿರಂಜ್, ಸಿರಪ್, ಔಷಧಿಗಳು ಪತ್ತೆಯಾಗಿದೆ. ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಮೊಹಮದ್ ರಫೀಕ್ ವಿರುದ್ದ ಕೂಡ್ಲಿಗಿ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ಟಿಎಚ್‌ಒ ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ಚೌಡಪ್ಪ, ಎಎಸ್‌ಐ ಬಸವರಾಜ್, ಪೇದೆ ಸಿ. ಜಗದೀಶ್ ಇದ್ದರು.