ಜಿಲ್ಲೆ

ಪೊಲೀಸರನ್ನು ಕಂಡೊಡನೇ ಹೋಟೆಲ್ ಒಳಗೆ ಓಡಿ ಬಾತ್​ರೂಂ ಸೇರಿಕೊಂಡ ಮಹಿಳೆ..!

ಹಾಸನ: ಖೋಟಾ ನೋಟು ಸಹಿತ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹಾಸನದ ಸಕಲೇಶಪುರ ನಗರದಲ್ಲಿ ಬುಧವಾರ ನಡೆದಿದೆ.

ಮಹಿಳೆಯ ಹೆಸರಿನ್ನೂ ತಿಳಿದುಬಂದಿಲ್ಲ. ಪೊಲೀಸರನ್ನು ಕಂಡೊಡನೇ ಆರೋಪಿ ಮಹಿಳೆ ಹೋಟೆಲ್ ಒಳಗೆ ಓಡಿ ಬಾತ್​ರೂಂ ಸೇರಿಕೊಂಡಿದ್ದಳು. ಅನುಮಾನಗೊಂಡ ಪೊಲೀಸರು ಆಕೆಯ ಬೆನ್ನಟ್ಟಿ ಹೋಗಿ ಹಿಡಿದು, ಪರಿಶೀಲಿಸಿದಾಗ ಆಕೆಯ ಬಳಿ ಖೋಟಾ ನೋಟುಗಳ ಬಂಡಲ್​ ಪತ್ತೆಯಾಗಿವೆ.

ಖೋಟಾ ನೋಟು ಬಂಡಲ್ ನೀಡಲು ನಕಾರ ವ್ಯಕ್ತಪಡಿಸಿದ ಮಹಿಳೆ, ಗಾಬರಿಗೆ ಕೆಲ ಹಿಡಿ ನೋಟುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾಳೆ. ಸದ್ಯ ಮಹಿಳೆ ಹಾಗೂ ಓರ್ವ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.

ಸಕಲೇಶಪುರದ ದೋಣಿಗಾಲ್ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಬಾಡಿಗೆ ಕಾರಿನಲ್ಲಿ ಬಂದಿದ್ದಳು. ಖೋಟಾ ನೋಟು ವಾಪಾಸ್ ಕಿತ್ತುಕೊಳ್ಳಲು ಕೆಲಕಾಲ ಮಹಿಳೆ ಪೊಲಿಸ್ ಜತೆ ಜಟಾಪಟಿಗೆ ಇಳಿದಿದ್ದಳು. (ದಿಗ್ವಿಜಯ ನ್ಯೂಸ್​)