ಜಿಲ್ಲೆ

ನಕಲಿ ಜಾತಿ ಪ್ರಮಾಣಪತ್ರ ಹೆಚ್ಚಳ ಸಮಗ್ರ ತನಿಖೆಗೆ ದಲಿತ ಮುಖಂಡರ ಆಗ್ರಹ

ಮಂಗಳೂರು: ದಲಿತ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿಯಡಿ ಉದ್ಯೋಗ ಪಡೆಯುವ ಪ್ರಕರಣ ಹೆಚ್ಚುತ್ತಿದ್ದು ಸಮಗ್ರ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.


ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.


ತನಿಖೆ ನಡೆಸಬೇಕಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಸಿಬ್ಬಂದಿ ಕೊರತೆ ಇದ್ದು ಅದನ್ನು ನೀಗಿಸಬೇಕು ಎಂದು ದಲಿತ ಮುಖಂಡ ಎಸ್.ಪಿ.ಆನಂದ ಒತ್ತಾಯಿಸಿದರು.


ನಗರದಲ್ಲಿ ಎಲ್ಲ ವೃತ್ತಗಳು ಅಭಿವೃದ್ಧಿ ಹೊಂದುತ್ತಿವೆ. ಆದರೆ ಅಂಬೇಡ್ಕರ್ ವೃತ್ತವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಡಿಸಿಪಿಗಳಾದ ದಿನೇಶ್ ಕುಮಾರ್ ಹಾಗೂ ಅಂಶುಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.


ದಲಿತ ಮುಖಂಡರಾದ ಜಗದೀಶ್ ಪಾಂಡೇಶ್ವರ, ಚಂದ್ರ ಕುಮಾರ್, ಸದಾಶಿವ ಉರ್ವಸ್ಟೋರ್, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.