ಜಿಲ್ಲೆ

ತುಷಾರ್​ ಗಿರಿನಾಥ್​ ಹೆಸರಿನಲ್ಲಿ ನಕಲಿ ಖಾತೆ: ಎಫ್​ಐಆರ್​ ದಾಖಲು

ಬೆಂಗಳೂರು:ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ವಂಚಕರು ನಕಲಿ ಫೇಸ್​​​​​ಬುಕ್​ ಖಾತೆ ತೆರೆದಿದ್ದಾರೆ.

ಈ ಸಂಬಂಧ ಕೆಲ ದೂರುಗಳ ಬಂದ ಹಿನ್ನೆಲೆಯಲ್ಲಿ ಸಿಇಎನ್​ ಪೊಲೀಸ್​ ಠಾಣೆಯಲ್ಲಿ(ಕೇಂದ್ರ ವಿಭಾಗ)ಎಫ್​​​​ಐಆರ್​ ದಾಖಲಾಗಿದೆ. ಆಯುಕ್ತರ ಭಾವಚಿತ್ರ, ಹೆಸರು, ಹುದ್ದೆ, ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿಖಾತೆ ಮೂಲಕ ಪಾಲಿಕೆ ಅಧಿಕಾರಿ, ನೌಕರರಿಗೆ,ಸಾರ್ವಜನಿಕರಿಗೆ ವಂಚಿಸಲು ಕಿಡಿಕೇಡಿಗಳು ಮುಂದಾಗಿದ್ದರು.

ಈಗಾಗಲೇ ಖಾತೆ ಡಿಲೀಟ್​ ಮಾಡಲಾಗಿದೆ. ನಕಲಿ ಖಾತೆ ತೆರೆದಿರುವ ಅಪರಿಚಿತರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುವಂತೆ ಮುಖ್ಯ ಆಯುಕ್ತರು, ಪೊಲೀಸರಿಗೆ ಮನವಿ ಮಾಡಿದ್ದಾರೆ.