ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಅವರ ಫೇಸ್‌ಬುಕ್ ಖಾತೆಯನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡಿ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಾ.ದುರ್ಗಾಪ್ರಸಾದ್ ಅವರ ಫೇಸ್‌ಬುಕ್ ಖಾತೆಯನ್ನು ಅವರ ಹೆಸರಿನಲ್ಲಿಯೇ ಮರು ರೂಪಿಸಿರುವ(ರೀ ಕ್ರಿಯೇಟ್) ಆರೋಪಿಗಳು, ಅವರ ಆಪ್ತರಲ್ಲಿ ಹಣದ ನೆರವು ಕೋರಿದ್ದಾರೆ. ಅನುಮಾನದಿಂದ ವಿಚಾರಿಸಿದಾಗ ನಿಜ ವಿಷಯ ಬಹಿರಂಗಗೊಂಡಿದೆ.