??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಜಾತ್ರೆಗಳು ನಾಡಿನ ಪರಂಪರೆ ಪ್ರತೀಕ

ಬೈಲಹೊಂಗಲ: ಧಾರ್ಮಿಕ ಸಭೆಗಳ ಮೂಲಕ ಶರಣರ ಸಂಸ್ಕಾರದ ಜ್ಞಾನಾಮತ ಸವಿದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಇನಾಮಹೊಂಗಲ ವಿರಕ್ತಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಕೊರವಿಕೊಪ್ಪ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಾತ್ರಾ ಮಹೋತ್ಸವ, ನೂತನ ರಥೋತ್ಸವ ವೆಭವ, ಪ್ರವಚನ ಸಮಾರಂಭ

ಉದ್ಘಾಟಿಸಿ ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಠವಾದದ್ದು, ರೀತಿ&ನೀತಿಗಳು ಸರಿಯಾಗಿದ್ದರೆ ಸಮಾಜ ನಮ್ಮನ್ನು ಸದಾ ಪ್ರೋತ್ಸಾಹಿಸುತ್ತದೆ. ಜಾತ್ರೆಗಳು ನಾಡಿನ ಪರಂಪರೆ ಬಿಂಬಿಸುವ ದ್ಯೋತಕವಾಗಿವೆ ಎಂದರು.

ಜಾತ್ರೆಗೆ ಸಕಲ ಸಹಕಾರ: ಶಾಸಕ ಮಹಾಂತೇಶ ಕೌಜಲಗಿ ಪ್ರವಚನ ಉದ್ಘಾಟಿಸಿ ಮಾತನಾಡಿ, ಜಾತ್ರೆ, ಧಾರ್ಮಿಕ ಸಭೆಗಳಲ್ಲಿ ಪೂಜ್ಯರ ಪ್ರವಚನ ಆಲಿಸುವುದರಿಂದ

ಸಮಾಜ ಸುಧಾರಣೆ ಸಾಧ್ಯ. ನೂತನ ರಥೋತ್ಸವದಿಂದ ಬಸವೇಶ್ವರ ಜಾತ್ರೆ ಮೆರುಗು -ಹೆ-ಚ್ಚಾ-ಗಿ-ದೆ. ದೇವಸ್ಥಾನ ಅಭಿವೃದಿಟಛಿ ಸೇರಿ ಜಾತ್ರಾ ಉತ್ಸವಕ್ಕೆ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಹೊಸೂರಿನ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ಉತ್ತಮ ಕಾಯಕದ ಮೂಲಕ ಬದುಕು ಸುಂದರವಾಗಿಸಿಕೊಳ್ಳಬೇಕು ಎಂದರು.

ಬಸವೇಶ್ವರರಿಗೆ ವಿಶೇಷ ಪೂಜೆ, ಪ್ರಾರ್ಥನೆ, ರುದ್ರಾಭಿಷೇಕ, ಪುಷ್ಪಾಲಂಕಾರ ಮಾಡಲಾಗಿತ್ತು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಗುಳೇದಗುಡ್ಡದ ಶಿವಶರಣ

ದೇವರು 11 ದಿನಗಳ ಪ್ರವಚನಕ್ಕೆ ಚಾಲನೆ ನೀಡಿದರು. ಮುನವಳ್ಳಿಯ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ, ದೊಡವಾಡದ ಜಡಿಸಿದ್ದೇಶ್ವರ ಸ್ವಾಮೀಜಿ

ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ,

ಅಮಿತ್​ ವಿಶ್ವನಾಥ ಪಾಟೀಲ, ಮಲ್ಲಣ್ಣಜ್ಜ ಕಲಭಾಂವಿ, ಮಲ್ಲಿಕಾರ್ಜುನ ಕುಲಕರ್ಣಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯ ಬಸವರಾಜ ಕಲಾದಗಿ, ಈರಣ್ಣ ಪ್ಯಾಟಿಮಠ, ಗ್ರಾಪಂ ಸದಸ್ಯ ಸೋಮಪ್ಪ ಗೌಡರ, ಬಾಬಣ್ಣ ಕಲ್ಲೂರ, ದೇವಸ್ಥಾನ ಕಮಿಟಿ ಅಧ್ಯಕ್ಷ ಗೂಳಪ್ಪ ಹೊಳಿ, ಶಂಕರೆಪ್ಪ ಕಲಭಾಂವಿ, ಶಿವಪ್ಪ ಅನಪಿನ, ಮಹಾಂತಯ್ಯ

ಹಿರೇಮಠ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಈರಪ್ಪ ಅಂಗಡಿ, ಸುರೇಶ ಹೊಳಿ, ನಾಗಪ್ಪ ಕಲಭಾರ, ಶಂಕರೆಪ್ಪ ಕಲಭಾರ, ಬಸಯ್ಯ ಪೂಜೇರ,

ಶಿವಯ್ಯ ಪೂಜೇರ, ಪುಟ್ಟಣ್ಣ ಯಕ್ಕುಂಡಿ, ಈರಣ್ಣ ಏಣಗಿ, ಪುಟ್ಟಣ್ಣ ಕಲಭಾಂವಿ, ನಿಂಗನಗೌಡ ಗೌಡರ, ಅಶೋಕ ಹೊಳಿ, ಬಸವೇಶ್ವರ ದೇವಸ್ಥಾನ ಟ್ರಸ್ಟ್​ ಕಮಿಟಿ ಸದಸ್ಯರು

ಹಾಗೂ ಭಕ್ತರಿದ್ದರು.