ಜಿಲ್ಲೆ

ಚಹಾದ ಅಂಗಡಿಗೆ ಬೆಂಕಿ ಸಾಮಾನುಗಳು ಸುಟ್ಟು ಹಾನಿ

ಕಲಬುರಗಿ : ನಗರದ ಸರ್ಧಾರ ವಲ್ಲಭಭಾಯಿ ಪಟೇಲ್ ಚೌಕ್ ನಿಂದ ಅಪ್ಪನ ಗುಡಿಗೆ ಹೋಗುವ ರಸ್ತೆಯಲ್ಲಿನ ಅರಣ್ಯ ಭವನ ಮುಂಭಾಗದಲ್ಲಿ ಇರುವ ಚಹಾ ಮತ್ತು ಆಲೂಬಾತ್ ಅಂಗಡಿಗೆ ಬೆಂಕಿ ಹತ್ತಿ ಸಾಮಾನುಗಳು ಸುಟ್ಟು ಹಾನಿಯಾದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಬಾಬುರಾವ ಯಡ್ರಾಮಿ

ಕಲಬುರಗಿ : ನಗರದ ಸರ್ಧಾರ ವಲ್ಲಭಭಾಯಿ ಪಟೇಲ್ ಚೌಕ್ ನಿಂದ ಅಪ್ಪನ ಗುಡಿಗೆ ಹೋಗುವ ರಸ್ತೆಯಲ್ಲಿನ ಅರಣ್ಯ ಭವನ ಮುಂಭಾಗದಲ್ಲಿ ಇರುವ ಚಹಾ ಮತ್ತು ಆಲೂಬಾತ್ ಅಂಗಡಿಗೆ ಬೆಂಕಿ ಹತ್ತಿ ಸಾಮಾನುಗಳು ಸುಟ್ಟು ಹಾನಿಯಾದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ರಮೇಶ್ ಎಂಬುವರಿಗೆ ಸೇರಿದ ಬಾಲಾಜಿ ಟೀ ಸ್ಟಾಲ್, ಆಲೂ ಬಾತ್ ಕೇಂದ್ರ ಬೆಂಕಿಗೆ ಅಹುತಿಯಾಗಿದೆ.

ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿರುವ ಶಂಕೆ, ಇದೆ. ಅಥವಾ ಯಾರೋ ರಾತ್ರಿಯಲ್ಲಿ ಬೀಡಿ ಇಲ್ಲವೇ ಸಿಗರೇಟ್ ಸೇದಿ ಆರಿಸದೆ ಹಾಗೆ ಬಿಸಾಕಿದ್ದರಿಂದ ಸಣ್ಣಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಅವಘಡದಲ್ಲಿ 1 ಲಕ್ಷ ಮೊತ್ತದ ಅಕ್ಕಿ, ಬೇಳೆ, ಸೇರಿದಂತೆ ದಿನಸಿ ಪದಾರ್ಥ , ಸ್ಟೋವ್ ಇನ್ನಿತರ ಸಾಮಾನಗಳು ಸುಟ್ಟು ಕರಕಲಾಗಿವೆ ಎಂದು ಹೇಳಲಾಗಿದೆ

ಮಾಹಿತಿ ಅರಿಯುತ್ತಲೇ ಅಗ್ನಿಶಾಮಕ ದಳ ಸಿಬ್ಬಂದಿ ದೌಯಿಸಿ ಬೆಂಕಿ ನಂದಿಸಿದರು. ಇನ್ ಇನ್ಸ್ಪೆಕ್ಟರ್ ಶಕೀಲ್ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಸ್ಟೇಷನ್ ಬಜಾರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.