ಜಿಲ್ಲೆ

ನ್ಯಾಯಬೆಲೆ ಅಂಗಡಿಗಳಿಗೆ ಡಿಸಿ ಹಠಾತ್ ಭೇಟಿ

Chitradurga

ಚಿತ್ರದುರ್ಗ: ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾ ಪ್ರಭು ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಶುಕ್ರವಾರ ಬೆಳಗ್ಗೆ ಹಠಾತ್ ಭೇಟಿ ನೀಡಿ ಪಡಿತರದಾರರ ಕುಂದು ಕೊರತೆಗಳನ್ನು ಆಲಿಸಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ 5.3 ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ 80 ಕೋಟಿ ಫಲಾನುಭವಿಗಳಿಗೆ ಆಹಾರಧಾನ್ಯ ಸರಬರಾಜು ಮಾಡಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳ ತಪಾಸಣೆ ಮತ್ತು ಪಡಿತರದಾರರ ಕುಂದುಕೊರತೆಗಳನ್ನು ಆಲಿಸಿ, ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಬುರುಜನಹಟ್ಟಿ ಡಿವಿಟಿ ಹಾಗೂ ಟೌನ್ ಕೋ-ಆಪರೇಟಿವ್ ಸೊಸೈಟಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಂಗಡಿಯವರು ಆನ್‌ಲೈನ್‌ನಲ್ಲಿ ನಮೂದಿಸಿರುವ ದಾಸ್ತಾನು ಪ್ರಮಾಣ ಹಾಗೂ ಅಂಗಡಿಯಲ್ಲಿರುವ ದಾಸ್ತಾನು ಹಾಗೂ ತೂಕದ ಯಂತ್ರದ ನಿಖರತೆ, ವಿತರಿಸಲಾಗುತ್ತಿರುವ ಆಹಾರ ಧಾನ್ಯದ ಪ್ರಮಾಣ ಪರಿಶೀಲಿಸಿದರು.

ಯೋಜನೆಯಡಿ ಅಕ್ಕಿ ಪೂರೈಸಲಾಗುತ್ತಿದೆ, ಅಕ್ಕಿಯ ಜತೆ ಗೋಧಿ, ರಾಗಿ ಮುಂತಾದ ಪೂರಕ ಆಹಾರಧಾನ್ಯಗಳನ್ನು ಪೂರೈಸುವಂತೆ ಪಡಿತರದಾರರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಆಹಾರ ನಿರೀಕ್ಷಕ ತಿಪ್ಪೇಶಪ್ಪ ಮತ್ತಿತರರು ಇದ್ದರು.