ಲಿಂಗಸುಗೂರು ಸಮೀಪದ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಿ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಪಿಐ ಪುಂಡಲೀಕ ಪಟಾತ್ತಾರ್ ಮಾತನಾಡಿದರು. ಪಿಎಸ್‌ಐ ನಾಗಪ್ಪ, ಎಸ್‌ಐ ಹುಲಗಪ್ಪ ನಾಯಕ, ಪಿಡಿಒ ಶಿವಪ್ಪ, ಮುಖಂಡರಾದ ದೇವಣ್ಣ, ರಾಮಣ್ಣ, ರಂಗನಾಥ, ಅಮರೇಶ, ಬಸನಗೌಡ ಮಾಲಿಪಾಟೀಲ್ ಇದ್ದರು. 
ಜಿಲ್ಲೆ

ಜಾತ್ರೆ ವೇಳೆ ಕಾನೂನು, ಸುವ್ಯವಸ್ಥೆ ಕಾಪಾಡಿ

ನರೇಶ್ ಕುಮಾರ್

ಲಿಂಗಸುಗೂರು: ತಾಲೂಕಿನ ಈಚನಾಳದ ಗ್ರಾಮ ದೇವತೆ ಗದ್ದೆಮ್ಮ ದೇವಿ ಜಾತ್ರೋತ್ಸವ ಪ್ರಯುಕ್ತ ಪಿಐ ಪುಂಡಲೀಕ ಪಟಾತ್ತಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಶಾಂತಿ ಪಾಲನಾ ಸಭೆ ನಡೆಯಿತು.

ಗದ್ದೆಮ್ಮ ದೇವಿ ಜಾತ್ರೆ ನಿಮಿತ್ತ ಮಾ.2 ರಿಂದ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಮಾ.5 ರಂದು ಮಹಾರಥೋತ್ಸವ ಜರುಗಲಿದೆ. ದೇವರ ಜಾತ್ರೆ, ಹಬ್ಬಗಳು ಸಂಭ್ರಮಾಚರಣೆ ಜತೆಗೆ ಪರಸ್ಪರ ಶಾಂತಿ ಸೌಹಾರ್ದತೆ ಹೆಚ್ಚಿಸುತ್ತವೆ.

ಜಾತ್ರೆ ವೇಳೆ ಕಾನೂನು ಬಾಹಿರ ಕೃತ್ಯಗಳು ಮತ್ತು ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಮುಖಂಡರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಪಿಐ ಪುಂಡಲೀಕ ಹೇಳಿದರು.

ಪಿಎಸ್‌ಐ ನಾಗಪ್ಪ, ಎಸ್‌ಐ ಹುಲಗಪ್ಪ ನಾಯಕ, ಪಿಡಿಒ ಶಿವಪ್ಪ, ಮುಖಂಡರಾದ ದೇವಣ್ಣ, ರಾಮಣ್ಣ, ರಂಗನಾಥ, ಅಮರೇಶ, ಬಸನಗೌಡ ಮಾಲಿಪಾಟೀಲ್, ಅಮರೇಶ ಪೂಜಾರಿ, ಹನುಮಂತ ದ್ಯಾಪುರಿ, ಆದಪ್ಪ ಮೇಟಿ, ವೆಂಕನಗೌಡ ಮೇಟಿ, ಅಯ್ಯಪ್ಪ ಗಾಳಿಪೂಜಿ, ಗದ್ದೆಪ್ಪ ಕನ್ನಾಳ, ಸಣ್ಣಗದ್ದೆಪ್ಪ ಹಳ್ಳಿ, ಅಮರೇಶ ಮೇಟಿ, ಆನಂದ ಕುಂಬಾರ, ರಮೇಶ ಚಿಗರಿ, ಹನುಮಂತ ಗೌಂಡಿ ಇದ್ದರು.