ಜಿಲ್ಲೆ

ಗುರ್ಲಾಪುರದಲ್ಲಿ ಜಾತ್ರೆ ಇಂದಿನಿಂದ

ಗುರ್ಲಾಪುರ: ಗ್ರಾಮದ ಶ್ರೀ ಲಕ್ಷಿ$್ಮ ದೇವಿ ಜಾತ್ರೆ ಸೆ.16ರಿಂದ 17ರ ವರೆಗೆ ಜರುಗಲಿದೆ. ಸೆ.16ರಂದು ಲಕ್ಷಿ$್ಮದೇವಿ ಉಡಿ ತುಂಬುವುದು, ಭಕ್ತರಿಂದ ನೈವೇದ್ಯ, ಹಾಗೂ ಹರಕೆ ತೀರಿಸುವ ಕಾರ್ಯಕ್ರಮ, ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಆಗಮನ ನಂತರ ಗ್ರಾಮದ ದೇವರುಗಳ ವಕ್ಕೊರಲ್ಲದಿಂದ ಪಲ್ಲಕ್ಕಿ ಉತ್ಸವ ಸೇವೆ ಆರಂಭವಾಗುವುದು. ಡೊಳ್ಳಿನ ಪದಗಳು ಜರುಗುವುದು. ಸೆ.17ರಂದು ಪಲ್ಲಕ್ಕಿ ಉತ್ಸವ ಶ್ರೀ ಲಕ್ಷಿ$್ಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಮರಳಿ ದೇವಸ್ಥಾನ ತಲುಪುವುದು. ನಂತರ ಮಹಾಪ್ರಸಾದ ಜರುಗುವುದು. ವಿವಿಧ ಬಗೆಯ ಸ್ಪರ್ಧೆಗಳು ಹಾಗೂ ಕಬ್ಬಡ್ಡಿ ಪಂದ್ಯಾವಳಿ ಮಧ್ಯಾಹ್ನ 2ಕ್ಕೆ ಆಯೋಜಿಸಲಾಗಿದೆ. ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ದತ್ತಾತ್ರೇಯ ಭೋದ ಸ್ವಾಮೀಜಿ, ಧರಬೋಧ ಶ್ರೀಗಳು, ಬಸವಣ್ಣಪ್ಪ ಮುಗಳಖೋಡ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಗಮಿಸುವರು.