ಜಿಲ್ಲೆ

ಮರೆಯಾದ ಮುಳ್ಳಹಳ್ಳಿ ಸುಣ್ಣ

ಗಂಗಾಧರ ಬಿ ವಿ

* ಹೊರ ರಾಜ್ಯಗಳಲ್ಲೂ ಇತ್ತು ಬೇಡಿಕೆ

* ಐತಿಹಾಸಿಕ ಹಿನ್ನೆಳೆಯುಳ್ಳ ಗ್ರಾಮ

ಗಂಗಾಧರ್ ಬೈರಾಪಟ್ಟಣ ರಾಮನಗರ

ಅದೊಂದಿತ್ತು ಕಾಲ, ಈ ಊರಲ್ಲಿ ಎಲ್ಲಿ ನೋಡಿದರಲ್ಲಿ ಸುಣ್ಣ ಬೇಯಿಸುವ ಗೂಡುಗಳು. ಸುಣ್ಣದ ಮೂಟೆ ಹೊತ್ತ ಕತ್ತೆಗಳ ಸಾಲು...

ಒಂದು ಕಾಲದಲ್ಲಿ ಈ ಊರಿನ ಸುಣ್ಣಕ್ಕೆ ಎಲ್ಲಿಲ್ಲದ ಬೇಡಿಕೆ. ಹಳೇ ಮೈಸೂರು ಪ್ರಾಂತ್ಯ ಮಾತ್ರವಲ್ಲದೇ, ಹೊರ ರಾಜ್ಯಗಳಲ್ಲೂ ಬೇಡಿಕೆ.. ಹೀಗೆ ಗತವೈಭವ ಹೊಂದಿದ್ದ ಊರಿನಲ್ಲಿ ಈಗ ಒಂದೇ ಒಂದು ಸುಣ್ಣ ಬೇಯಿಸುವ ಗೂಡನ್ನು ಬಿಟ್ಟಿರೆ ಎಲ್ಲವೂ ಮಾಯ.. ಇದು ಯಾವ ಊರು ಎನ್ನುವ ಪ್ರಶ್ನೆಯೇ? ಹೌದು..

ಇದೇ ಮುಳ್ಳಹಳ್ಳಿ. ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿಯ ಗ್ರಾಮ.

ಸುಣ್ಣಕ್ಕೆ ಫೇಮಸ್:

ಮುಳ್ಳಹಳ್ಳಿ ಗ್ರಾಮ ಕಳೆದ ಕೆಲವು ವರ್ಷಗಳ ವರೆಗೂ ಸುಣ್ಣಕ್ಕೆ ತುಂಬಾ ಹೆಸರುವಾಸಿಯಾಗಿತ್ತು. ಇಲ್ಲಿ ಬೇಯಿಸಿದ ಸುಣ್ಣಕ್ಕೆ ನೆರೆಯ ತಮಿಳುನಾಡು, ಆಂ‘್ರಪ್ರದೇಶದಲ್ಲಿಯೂ ಬೇಡಿಕೆ ಇತ್ತು. ಮೈಸೂರು ರಾಜರೂ ಮುಳ್ಳಹಳ್ಳಿ ಸುಣ್ಣಕ್ಕೆ ಮನ ಸೋತಿದ್ದರು. ಈ ಹಿನ್ನೆಲೆಯಲ್ಲಿ ಮುಳ್ಳಹಳ್ಳಿ ಗ್ರಾಮ ಒಂದು ಕಾಲದಲ್ಲಿ ಚಟುವಟಿಕೆಯ ಕೇಂದ್ರವಾಗಿತ್ತು. ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಹಲವಾರು ಮಂದಿ, ಸುಣ್ಣವನ್ನು ಸಿದ್ಧಪಡಿಸಿಕೊಂಡು, ಕತ್ತೆಗಳ ಮೇಲೆ ಹೇರಿಕೊಂಡು ಮಾರುಕಟ್ಟೆಗೆ ಸಾಗಿಸುತ್ತಿದ್ದರು.

ಎಲ್ಲ ಮಾಯ:

ಆದರೆ, ಈಗ ಮುಳ್ಳಹಳ್ಳಿಯ ಸುಣ್ಣದ ವೈ‘ವ ಮರೆಯಾಗಿದೆ. ಈಗಲೂ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಕಾರಣ ಚಟುವಟಿಕೆಗಳು ನಡೆಯುತ್ತಿವೆಯಾದರೂ, ಹಿಂದಿನಷ್ಟಿಲ್ಲ ಎನ್ನುತ್ತಾರೆ ಸ್ಥಳೀಯರು. ಹಿಂದೆ ಬಹುತೇಕರ ಮನೆಯಲ್ಲಿ ಸುಣ್ಣ ಬೇಯಿಸುವ ಗೂಡುಗಳು ಇದ್ದವು. ಈಗ ಇಡೀ ಗ್ರಾಮದಲ್ಲಿ ಒಂದೇ ಒಂದು ಮನೆಯಲ್ಲಿ ಮಾತ್ರ ಸುಣ್ಣ ಬೇಯಿಸುವ ಗೂಡು ಇದ್ದು, ಅದೂ ಅಪರೂಪಕ್ಕೆ ಮಾತ್ರ ಉರಿಯುತ್ತದೆ. ಗ್ರಾಮದಲ್ಲಿ ಕಟ್ಟಿಗೆ ತರಲು, ಸುಣ್ಣ ಸಾಗಿಸಲು ಬಳಕೆ ಆಗುತ್ತಿದ್ದದ್ದೆ ಕತ್ತೆಗಳು. ಸುಣ್ಣ ಬೇಯಿಸುವ ಚಟುವಟಿಕೆ ಕಡಿಮೆ ಆದಂತೆ ಕತ್ತೆಗಳು ಮಾಯವಾಗಿವೆ.

ವನ್ಯ ಜೀವಿ ಕಾಯ್ದೆ ಆಪತ್ತು?

ಮುಳ್ಳಹಳ್ಳಿಯ ಸುಣ್ಣದ ವ್ಯಾಪಾರ ಸಂಪೂರ್ಣವಾಗಿ ಕುಸಿಲು ಕಾರಣ ಗ್ರಾಮದ ಹತ್ತಿರದಲ್ಲಿಯೇ ಇದ್ದ ಅರಣ್ಯ ವನ್ಯ ಜೀವಿಧಾಮವಾಗಿ ಬದಲಾವಣೆ ಆದದ್ದು. ಕಾವೇರಿ ವನ್ಯ ಜೀವಿ ಧಾಮಕ್ಕೆ ಈ ಅರಣ್ಯ ಸೇರಿಕೊಂಡ ಹಿನ್ನೆಲೆಯಲ್ಲಿ ಕಾಡಿಗೆ ತೆರಳಿ ಕಟ್ಟಿಗೆ ತರುವುದು ಹಾಗೂ ಸುಣ್ಣ ಮಾಡಲು ಬೇಕಾದ ಕಚ್ಚಾ ವಸ್ತುವನ್ನು ತರುವುದು ಕಷ್ಟವೇ ಆಯಿತು. ಇದರ ಪರಿಣಾಮ ಹಂತ ಹಂತವಾಗಿ ಸುಣ್ಣದ ವ್ಯಾಪಾರದಿಂದ ಜನತ ಹಿಂದೆ ಸರಿದರು ಎನ್ನುತ್ತಾರೆ ಗ್ರಾಮದ ಹಿರಿಯದಾರ ಬೋಜಯ್ಯ.

ಗ್ರಾಮ ಕಾಯುವ ಮಾರಮ್ಮ

ಮುಳ್ಳಹಳ್ಳಿ ಮಾರಮ್ಮ ಎಂದೇ ಹೆಸರಾಗಿರುವ ಮಾರಮ್ಮ, ಸುತ್ತಮುತ್ತಲ ಏಳು ಗ್ರಾಮಗಳ ಗ್ರಾಮ ದೇವತೆ. ವ್ಯಾಪಾರಕ್ಕೆ ಬಂದವರು ಬುಟ್ಟಿಯಲ್ಲಿ ತಂದು ಪ್ರತಿಷ್ಠಾಪನೆ ಮಾಡಿದ ದೇವತೆ ಎನ್ನುವ ಮಾತುಗಳು ಇವೆಯಾದರೂ, ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಪ್ರತಿ ವರ್ಷ ಅದ್ದೂರಿಯಾಗಿಯೇ ಎಲ್ಲರೂ ಒಗ್ಗೂಡಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಾರೆ. ಇನ್ನು ಗ್ರಾಮದ ಇತಿಹಾಸ ಸಾರುವ ಚೋಳರ ಕಾಲದ ಶಾಸನವೊಂದು ಇತ್ತೀಚಿಗೆ ಕಣ್ಮರೆಯಾಗಿದೆ ಎನ್ನುವ ಮಾಹಿತಿಯೂ ಇದೆ.

ಹೆಸರು ಬಂದಿದ್ದು ಹೇಗೆ?

ಮುಳ್ಳಹಳ್ಳಿಗೆ ಹೆಸರು ಬಂದಿದ್ದು ಹೇಗೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಈ ‘ಾಗದಲ್ಲಿ ಚಾಲ್ತಿಯಲ್ಲಿರುವಂತೆ ಪಕ್ಕದ ಏಳಗಳ್ಳಿಯಲ್ಲಿ ಇರುವ ತಾಯಿ ಮುದ್ದಮ್ಮ ದೇವಿಯನ್ನು ಮೋಡಿ ಮಂತ್ರದ ಮೂಲಕ ಕಟ್ಟಿ ಹಾಕಲು ಬಂದ ಮೋಡಿಗಾರರಿಗೆ ಬುದ್ಧಿ ಕಲಿಸುವ ವೇಳೆ ನಡೆದ ಘಟನೆಯಿಂದ ಮುಳ್ಳಹಳ್ಳಿ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.

ಒಂದು ದಿನ ಕೊಳ್ಳೇಗಾಲದ ಮೋಡಿ ವಾಂತ್ರಿಕರು ಗಿಡಮೂಲಿಕೆ ಹುಡುಕುತ್ತಾ ಶಿವಾಲ್ದಪ್ಪನ ಬೆಟ್ಟಕ್ಕೆ ಬಂದಾಗ, ಏಳಗಳ್ಳಿ ಗ್ರಾಮ ಕಾಣಿಸಿದೆ. ಹಣ ಸಂಪಾದನೆ ಮಾಡಲು ಇಲ್ಲಿಗೆ ಬರುತ್ತಾರೆ. ಜನರನ್ನು ಸೇರಿಸಿ ರಾಜಮೋಡಿ, ರಕ್ತಮೋಡಿ, ರಣಮೋಡಿ ಹಾಕುತ್ತಾರೆ. ಆದರೆ, ಇದು ಯಾವುದೂ ಕೆಲಸ ಮಾಡುವುದಿಲ್ಲ. ಗ್ರಾಮದಲ್ಲಿ ತಾಯಿ ಮುದ್ದಮ್ಮ ಇರುವುದೇ ಇದಕ್ಕೆ ಕಾರಣ ಎನ್ನುವುದನ್ನು ಅರಿತು. ನಮ್ಮ ವಾನ ಉಳಿಸಿಕೊಳ್ಳುವ ಸಲುವಾಗಿ ಒಬ್ಬ ವಾಂತ್ರಿಕ ತಾಯಿಮುದ್ದಮ್ಮ ಹಾಗೂ ಶಿವಪ್ಪ ಒಡೆಯರು ಕುಳಿತ ಸ್ಥಳದಿಂದ ಮೇಲೆ ಏಳದಂತೆ ಮೋಡಿ ಹಾಕಿ ಅವರು ಸಂಗಮದ ವಾರ್ಗ ತಮ್ಮ ಊರು ಕೊಳ್ಳೇಗಾಲಕ್ಕೆ ಹೋಗಲು ಸಿದ್ಧರಾಗುತ್ತಾರೆ. ಈ ವೇಳೆ ತಾಯಿಮುದ್ದಮ್ಮ ಮೋಡಿ ಹಾಕಿದ ಮಾಂತ್ರಿಕರಿಗೆ ವಿವಿಧರೀತಿಯ ಕಡಜಗಳ ಮೂಲಕ ಕಚ್ಚಿಸಿ ಬುದ್ಧಿ ಕಲಿಸಿ ವಾಪಾಸ್ ತಾನಿದ್ದ ಏಳಗಳ್ಳಿಗೆ ಕರೆಸಿಕೊಳ್ಳುತ್ತಾಳೆ. ಹೀಗೆ ಹೆಗ್ಗಡಜ ಬಂದ ಸ್ಥಳಕ್ಕೆ ಹೆಗ್ಗನೂರು, ಅರಿಶಿಣ ಕಡಜ ಬಂದ ಊರಿಗೆ ಅರಿಶಿಣಕೆರೆ ಎಂತಲೂ, ಮುಳ್ಳು ಕಡಜಗಳನ್ನು ಬಂದ ಊರಿಗೆ ಮುಳ್ಳಹಳ್ಳಿ ಎಂತಲೂ ಹೆಸರಾಗಿದೆ ಎಂದು ಹೇಳಲಾಗುತ್ತದೆ. ನಂತರ ತಾಯಿ ಮುದ್ದಮ್ಮನ ಶಕ್ತಿಯ ಅರಿವಾಗಿ ತಾಯಿಯ ಬಳಿ ಹೋಗಿ ತಮ್ಮ ತಪ್ಪನ್ನು ಮನ್ನಿಸುವಂತೆ ಕೋರುತ್ತಾರೆ. ಈ ಹಿನ್ನೆಲೆಯಲ್ಲಿ ತಾಯಿ ಮುದ್ದಮ್ಮ ನೆಲೆ ನಿಂತಿರುವ ಏಳಗಳ್ಳಿಯಲ್ಲಿ ಯಾವುದೇ ಮೋಡಿ, ವಾಟ ವಾಡಲು ಸಾ‘್ಯವಿಲ್ಲ ಎನ್ನುವ ಪ್ರತೀತಿ ಇಂದಿಗೂ ಇದೆ.