ಕುಕನೂರು ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಲಪ್ಪ ಆಚಾರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿರಿಯ ಸಾಹಿತಿ ಕೆ.ಬಿ.ಬ್ಯಾಳಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ಶಿವಣ್ಣ ರಾಯರಡ್ಡಿ, ಡಾ.ಮಹಾದೇವ ಸ್ವಾಮೀಜಿ, ಇಟಗಿಯ ಶ್ರೀ ಶಿವಶರಣ ಗದಿಗೇಪ್ಪಜ್ಜನವರ ಇತರರಿದ್ದರು. 
ಜಿಲ್ಲೆ

ವಾಸ್ತವಿಕ ಸತ್ಯ ಹೊರತರುವ ಕೆಲವಾಗಲಿ

ರುದ್ರಪ್ಪ ವಾಲಿ

ಕುಕನೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಶಕ್ತಿ ಶಾಲಿಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮ ಮತ್ತು ಪತ್ರಿಕಾ ರಂಗವು ಆಯುದ್ಧವಾಗಿದ್ದು, ಒಂದು ಕಡೆ ಪ್ರಮುಖವಾಗಿ ನ್ಯಾಯಾಂಗವಿದ್ದರೇ ಇನ್ನೊಂದು ಪತ್ರಿಕಾ ರಂಗವು ಎಲ್ಲರ ತಪ್ಪು, ಸರಿಯನ್ನು ತಿಳಿಸುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ವಾಸ್ತವಿಕ ಸತ್ಯ ಹೊರ ತರುವ ಕೆಲವನ್ನು ಮಾಧ್ಯಮ ಮಾಡಬೇಕು. ಅಂದಾಗ ಮಾತ್ರ ಸಮಾಜ ಉತ್ತಮ ದಾರಿಯಲ್ಲಿ ಸಾಗುತ್ತದೆ ಎಂದರು.

ಹಿರಿಯ ಸಾಹಿತಿ ಕೆ.ಬಿ.ಬ್ಯಾಳಿ ಮಾತನಾಡಿ, ಡಿವಿ ಗುಂಡಪ್ಪನವರು ಹಳೆಯ ಬೇರು ಹೊಸ ಚಿಗುರು ಕೂಡಿದರೇ ಸೊಗಸು ಎನ್ನುವಂತೆ ಈ ಪತ್ರಿಕಾ ದಿನಾಚರಣೆ ಕೂಡ ಅದೇ ರೀತಿ ಆಚರಿಸುತ್ತಿದ್ದಾರೆ. ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಪತ್ರಿಕೆಗಳು ಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು, ವೈದ್ಯರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ಸ್ವಾಮೀಜಿ, ಇಟಗಿಯ ಶ್ರೀಶಿವಶರಣ ಗದಿಗೇಪ್ಪಜ್ಜನವರ ಸಾನ್ನಿಧ್ಯ ವಹಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಕಾನಿಪ ತಾಲೂಕು ಅಧ್ಯಕ್ಷ ನಾಗರಾಜ ಬೆಣಕಲ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ, ಪ್ರಾಕೃಪಸ ಸಂಘ ಅಧ್ಯಕ್ಷ ಶಂಭು ಜೋಳದ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಪ್ರಮುಖರಾದ ದೇವಪ್ಪ ಅರಕೇರಿ, ರಹೇಮಾನಸಾಬ್ ಮಕ್ಕಪ್ಪನವರ, ಪತ್ರಕರ್ತರಾದ ಅಲ್ಲಾವುದ್ದಿನ್ ಯಮ್ಮಿ, ಬಸವರಾಜ ಕೊಡ್ಲಿ ಇತರರಿದ್ದರು.