ಜಮಖಂಡಿ ನಗರದ ಬೈಪಾಸ್ ರಸ್ತೆಯ ಸನಾಳ ಕ್ರಾಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾರ್ಖಾನೆ ಸುಟ್ಟು ಕರಕಲಾಗಿರುವುದು. 
ಜಿಲ್ಲೆ

ಶಾರ್ಟ್ ಸರ್ಕ್ಯೂಟ್‌ಗೆ ಕಾರ್ಖಾನೆ ಭಸ್ಮ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ನಗರದ ಬೈಪಾಸ್ ರಸ್ತೆಯ ಸನಾಳ ಕ್ರಾಸ್‌ನಲ್ಲಿನ ರಿಯಲ್ ಪೊಮ್ ಆ್ಯಂಡ್ ಮ್ಯಾಟ್ರಿಸ್ ಕಾರ್ಖಾನೆ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾಗಿದೆ.

ಅಯ್ಯೂಬ ವಾಲಿಕಾರಗೆ ಸೇರಿದ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಅವಘಡ ಸಂಭವಿಸಿದ್ದು, ಅಂದಾಜು 2 ಕೋಟಿ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿವೆ ಎನ್ನಲಾಗಿದೆ.

ಜಮಖಂಡಿ, ಮುಧೋಳ, ಬನಹಟ್ಟಿಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ಹಾಜಿ ಇಲಾಹಿ ಕಂಗನೊಳ್ಳಿ ಭೇಟಿ ನೀಡಿದರು. ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.