ಕೆ.ವಿರೂಪಾಕ್ಷಪ್ 
ಜಿಲ್ಲೆ

ಕಾರ್ಖಾನೆಗಳ ವಿರುದ್ಧ ಹೋರಾಟ ಅಗತ್ಯ

Kopala - Desk - Eraveni

ಸಿಂಧನೂರು: ಕೊಪ್ಪಳ ಜಿಲ್ಲೆಯಲ್ಲಿರುವ ಫ್ಯಾಕ್ಟರಿಗಳಿಂದ ತುಂಗಭದ್ರಾ ನದಿ ಕಲುಷಿತಗೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ಶುದ್ಧ ನೀರು ಕೊರತೆಯಾಗಲಿದೆ. ನಿವಾರಣೆಗೆ ದೊಡ್ಡ ಮಟ್ಟದ ಅಭಿಯಾನ ನಡೆಸುವ ಅಗತ್ಯವಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಕಕ ಭಾಗಕ್ಕೆ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದ್ದು, ಕುಡಿವ ನೀರು ಹಾಗೂ ಕೃಷಿಗೆ ಅವಲಂಬಿಸಿದ್ದೇವೆ. ಕೊಪ್ಪಳ ಜಿಲ್ಲೆಯ ಗಿಣಿಗೇರಾ ಸೇರಿ ಅಕ್ಕಪಕ್ಕದಲ್ಲಿ ಹಲವು ಫ್ಯಾಕ್ಟರಿಗಳಿವೆ. ಈಗ ಹೊಸದಾಗಿ ಫ್ಯಾಕ್ಟರಿ ಆರಂಭಿಸಲು ಮುಂದಾಗಿದ್ದು, ಇವುಗಳಿಗೆ ತುಂಗಭದ್ರಾ ಜಲಾಶಯದ ನೀರು ಬೇಕು.

ಜತೆಗೆ ಸುತ್ತಲಿನ ವಾತಾವರಣ ಕಲುಷಿತಗೊಂಡು, ಮರಳಿ ಜಲಾಶಯಕ್ಕೆ ವ್ಯಾಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೊಪ್ಪಳ ಗವಿಸಿದ್ಧೇಶ್ವರ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಿ, ಬಿಎಸ್‌ಪಿಲ್ ಫ್ಯಾಕ್ಟರಿ ಆರಂಭಕ್ಕೆ ತಡೆ ಬಿದ್ದಿದೆ. ಇಂಥ ಹೋರಾಟಗಳು ಈ ಭಾಗದಲ್ಲಿ ನಡೆಯಬೇಕು. ತುಂಗಭದ್ರಾ ಜಲಾಶಯ ಉಳಿಸುವತ್ತ ಯೋಜಿತವಾದ ಹೋರಾಟ ನಡೆಯಬೇಕು. ಮುಂದಿನ ವಾರದಲ್ಲಿ ಇಲ್ಲಿ ಪಕ್ಷಾತೀತವಾಗಿ ಎಲ್ಲ ಮುಖಂಡರನ್ನು ಕರೆದು ಗವಿಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಸುವ ಆಲೋಚನೆ ಹೊಂದಲಾಗಿದೆ ಎಂದರು ತಿಳಿಸಿದರು.

ಜೋಳದ ಖರೀದಿಸಲಿ: ಈಗಾಗಲೇ ರೈತಾಪಿ ವರ್ಗ ಜೋಳದ ರಾಶಿ ಮಾಡಿಕೊಂಡು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ, ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ದೂರಿದರು. ಸಾವಿರಾರು ಎಕರೆ ಪ್ರದೇಶದಲ್ಲಿ ಸಾಲ ಮಾಡಿ ಜೋಳ ಬೆಳೆದಿದ್ದು, ಜಾಗವಿಲ್ಲದೆ ರಸ್ತೆ ಸೇರಿ ಇತರೆ ಕಡೆಗಳಲ್ಲಿ ಧಾನ್ಯ ಹಾಕಲಾಗಿದೆ. ಕೂಡಲೇ ಜೋಳ ಖರೀದಿ ಪ್ರಕ್ರಿಯೆ ಸರ್ಕಾರ ಆರಂಭಿಸಬೇಕೆಂದು ಒತ್ತಾಯಿಸಿದರು.

ಮಾಜಿ ಸಂಸದಕೆ.ವಿರೂಪಾಕ್ಷಪ್ಪಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಅಂಥದ್ದೇನಿಲ್ಲ. ಹೊಸ ಯೋಜನೆ, ಅನುದಾನ ಇಲ್ಲ. ಕೆಪಿಎಸ್ಸಿ, ಶಿಕ್ಷಕರ ನೇಮಕಾತಿ ಕೈಬಿಡಲಾಗಿದೆ. ಇದೊಂದು ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೆಟ್ ಆಗಿದೆ. ನವಲಿ ಜಲಾಶಯ ನಿರ್ಮಾಣ ಪ್ರಸ್ತಾಪವಿಲ್ಲ. ಎರಡು ರಾಜ್ಯಗಳ ಸಿಎಂಗಳ ಜತೆ ಮಾತುಕತೆ ಎಂದ್ಹೇಳಿ ಕಾಲ ಕಳೆಯಲಾಗುತ್ತಿದೆ.