ಸರ್ಜಾಪುರ: ಆನೇಕಲ್ ತಾಲೂಕು ಸರ್ಜಾಪುರ ಸಮೀಪದ ಮುತ್ತನಲ್ಲೂರಲ್ಲಿ ತಾಲೂಕು ಭೂಸ್ವಾಧಿನ ವಿರೋಧ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಜಯ ಕರ್ನಾಟಕ ಸಂಟನೆ ಬೆಂಬಲ ನೀಡಿತು. ರಾಜ್ಯ ಸರ್ಕಾರವು ಸ್ವ್ಟ್ಿ ಸಿಟಿ ಹೆಸರಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ಭೂಮಿಗಳಲ್ಲಿ ಕಾರ್ಖಾನೆಗಳು ಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಜಯ ಕರ್ನಾಟಕ ಸಂಟನೆಯ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಿರಣ್ ಪ್ರಭಾಕರ್ ರೆಡ್ಡಿ ಹೇಳಿದರು. ರಾಜ್ಯ ಸರ್ಕಾರವು ಭೂಸ್ವಾಧಿನಪಡಿಸಿಕೊಳ್ಳಲು ಗುರುತಿಸಿರುವ ಭೂಮಿಯು ಫಲವತ್ತಾಗಿದೆ.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಸಾಕಷ್ಟು ಬಂಜರು ಭೂಮಿಗಳಿದ್ದರೂ ಅಲ್ಲಿಗೆ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಲು ರಾಜ್ಯಸರ್ಕಾರ ಏಕೆ ಚಿಂತಿಸುತ್ತಿಲ್ಲ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಮತ್ತು ಕೆ.ಎಚ್.ಬಿ.ಗಳಿಗೆ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿವೆ. ಹೀಗಿರುವಾಗ ಸರ್ಜಾಪುರ ಹೋಬಳಿಯಲ್ಲಿ ಸ್ವ್ಟ್ಿ ಸಿಟಿ ಮಾಡಿ ಏನು ಅಭಿವೃದ್ಧಿ ಮಾಡಲಿದೆ ಎಂದರು. ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯರಾದ ವಿಶ್ವನಾಥರೆಡ್ಡಿ, ಆರ್.ಕೃಷ್ಣಾರೆಡ್ಡಿ, ರೈತ ಮುಖಂಡರಾದ ಆರ್.ಕೇಶವ್, ರಾಧಾನಾಗರಾಜ್ ರೆಡ್ಡಿ, ಗೋಪಾಲ್ ರೆಡ್ಡಿ, ಬಾಬು ಪ್ರಸಾದ್, ಗುರುಮೂರ್ತಿ ರೆಡ್ಡಿ, ಪ್ರತಾಪ್, ನಾಗೇಶ್, ಮಧುಸೂಧನ್ ರೆಡ್ಡಿ, ಕೆ.ಲೋಕೇಶ್, ಹರೀಶ್, ಪ್ರಸನ್ನ, ಎಸ್.ಸತೀಶ್ ಬಾಬು, ಜಯಕರ್ನಾಟಕ ಸಂಟನೆಯ ಪದಾದಿಕಾರಿಗಳಾದ ಕಿಶೋರ್, ರವಿಕುಮಾರ್, ಯಾಸ್ಮೀನ್ ತಾಜ್, ವಿನೋದ್, ನಂದೀಶ್, ಮಧು ಇದ್ದರು.