ಕಾರಟಗಿ: ಛಾಯಾಗ್ರಾಹಕರಿಗೆ ವಿವಿಧ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಛಾವಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಪರಮೇಶ್ವರ ತಿಳಿಸಿದರು.
ಇದನ್ನೂ ಓದಿ:http://ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ
ಪಟ್ಟಣದ ಸ್ಟುಡಿಯೋ ಒಂದರಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘ ತಾಲೂಕು ಘಟಕದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾನುವಾರ ಮಾತನಾಡಿದರು. ಛಾಯಾಗ್ರಾಹಕರಿಗೆ ಬ್ಯಾಂಕ್‌ಗಳು ಸೂಕ್ತ ಸಾಲಸೌಲಭ್ಯ ನೀಡುವುದಿಲ್ಲ. ಸರ್ಕಾರದಿಂದಲೂ ಯಾವುದೇ ಸೌಕರ್ಯ ದೊರೆಯದಂತಾಗಿದೆ.
ಈಗಾಗಲೇ ನೋಂದಾಯಿತ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಾರಟಗಿ ನೂತನ ಸಂಘವನ್ನು ರಾಜ್ಯ ಸಂಘದೊಂದಿಗೆ ಅಧಿಕೃತವಾಗಿ ನೋದಾಯಿಸಲಾಗಿದೆ.
ಅಲ್ಲದೇ ಸೆ.7, 8 ಮತ್ತು 9ರಂದು ಬೆಂಗಳೂರಿನಲ್ಲಿ ನಡೆಯುವ ಡಿಜಿ ಇಮೇಜ್ ಅಂತಾರಾಷ್ಟ್ರೀಯ ಫೋಟೋಗ್ರಫಿ ಪ್ರದರ್ಶದನಲ್ಲಿ ಎಲ್ಲರೂ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಘದ ತಾಲೂಕು ಘಟಕದ ಖಜಾಂಚಿ ಸುನೀಲ್, ಪದಾಧಿಕಾರಿಗಳಾದ ಸುನೀಲ್, ಭವಾನಿ ಸಿಂಗ್, ಆದಿ, ಬಸಯ್ಯಸ್ವಾಮಿ ನವಲಿ, ಬಸವರಾಜ ಹೊಸಮನಿ, ಬಸವರಾಜ ಉಳೇನೂರು ಇತರರಿದ್ದರು.