ಚಂದಾಪುರ ಪುರಸಭೆ ವ್ಯಾಪ್ತಿಯ ಲ್ಮಸಾಗರದಲ್ಲಿ 60 ಲ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪುರಸಭಾ ಅಧ್ಯೆ ಶಾರದಾ ವರದರಾಜು ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಎಸ್​.ಆರ್​.ಟಿ.ಅಶೋಕ್​ರೆಡ್ಡಿ, ರಾಮೇಗೌಡ, ನಾಗರಾಜು, ಚಂದಾಪುರ ಪುರಸಭಾ ಉಪಾಧ್ಯೆ ಮಂಜುಳಾ, ಸದಸ್ಯರಾದ ಭಾರತಿ ಬಸವರಾಜು, ಸೋಮಶೇಖರರೆಡ್ಡಿ, ಕೃಷ್ಣಾರೆಡ್ಡಿ ಇದ್ದರು. 
ಜಿಲ್ಲೆ

ಎಲ್ಲ ವಾರ್ಡ್​ಗಳಿಗೆ ಸೌಲಭ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​: ಚಂದಾಪುರ ಪುರಸಭೆ ಆನೇಕಲ್​ ತಾಲೂಕಿನ ಹೃದಯ ಭಾಗದಲ್ಲಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಿದೆ, ಹಾಗಾಗಿ ಈ ಪ್ರದೇಶ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್​ಗಳಲ್ಲಿ ಮೂಲ ಸೌಲಭ್ಯಕ್ಕೆ ಗಮನ ನೀಡಲಾಗಿದೆ ಎಂದು ಪುರಸಭಾ ಅಧ್ಯೆ ಶಾರದಾ ವರದರಾಜು ಹೇಳಿದರು.

ಚಂದಾಪುರ ಪುರಸಭೆ ವ್ಯಾಪ್ತಿಯ ಲ್ಮಸಾಗರದಲ್ಲಿ 60 ಲ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚಂದಾಪುರದಿಂದ ಲಕ್ಷಿ$್ಮಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು ಭೂಮಿ ಪೂಜೆಯಿಂದಾಗಿ ಸಾರ್ವಜನಿಕರಿಗೆ ಉಪಯುಕ್ತವಾಗಿದೆ ಎಂದರು.

ಪುರಸಭೆಯ ಬಜೆಟ್​ನಲ್ಲಿ ಸಂಪರ್ಕ ರಸ್ತೆಗಳು, ಶುದ್ಧ ಕುಡಿಯುವ ನೀರಿನ ಟಕ ಸೇರಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಚಂದಾಪುರ ಪುರಸಭೆಯು ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಹೆಚ್ಚಿನ ಜನ ಸಂಚಾರವಿರುತ್ತದೆ ಈ ನಿಟ್ಟಿನಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಗಮನವಹಿಸಿದೆ ಎಂದರು.