ಮಂಗಳೂರು: ಜನಸಾಮಾನ್ಯರು ಬಳಸುವ ಸೇವೆಗೆ ಆಧುನಿಕತೆ ಮತ್ತು ನವೀನ ತಂತ್ರಜ್ಞಾನದ ಲಾಭ ಅವಶ್ಯಕ. ಆದರೆ ಹೊಸ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಲು ಆರಂಭದಲ್ಲಿ ಪ್ರೋತ್ಸಾಹಕ ಕ್ರಮಗಳು ಅಗತ್ಯ. ಆದ್ದರಿಂದಲೇ ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವ ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ(ಎಟಿವಿಎಂ) ಬಳಸುವ ಸಂದರ್ಭ ಪ್ರಯಾಣಿಕರಿಗೆ ನೆರವಾಗಲು ಸಹಾಯಕರನ್ನು ನೇಮಿಸಲು ಮುಂದಾಗಿದೆ.
ಪ್ರಥಮ ಹಂತದಲ್ಲಿ ಎಟಿವಿಎಂ ಲಭ್ಯವಿರುವ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 21, ಮಂಗಳೂರು ಜಂಕ್ಷನ್‌ನಲ್ಲಿ 9, ಕಾಸರಗೋಡಿನಲ್ಲಿ 18 ಸಹಿತ ಪಾಲಕ್ಕಾಡು ವಿಭಾಗ ವ್ಯಾಪ್ತಿ ಒಟ್ಟು 300 ಸಹಾಯಕರನ್ನು ನೇಮಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಮಂಗಳೂರು ಸೆಂಟ್ರಲ್‌ನಲ್ಲಿ ಐದು ಮತ್ತು ಮಂಗಳೂರು ಜಂಕ್ಷನ್‌ನಲ್ಲಿ ಒಂದು ಎಟಿವಿಎಂಗಳು ಇವೆ.
ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರವನ್ನು ಕನಿಷ್ಠ ಪ್ರಮಾಣದ ಪ್ರಯಾಣಿಕರು ಮಾತ್ರ ಬಳಸುತ್ತಿರುವುದು ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವ ಹಳೇ ವ್ಯವಸ್ಥೆಯನ್ನೇ ಹೆಚ್ಚಿನ ಪ್ರಯಾಣಿಕರು ಅವಲಂಬಿಸಿದ್ದಾರೆ. ಎಟಿವಿಎಂ ಬಳಕೆಗೆ ಜನರ ನೆರವಿಗೆ ರೈಲ್ವೆಯ ನಿವೃತ್ತ ನೌಕರರು ನೆರವಾಗುತ್ತಿದ್ದು, ಅವರಿಂದ ದಿನದ 24 ಗಂಟೆ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಇಲಾಖೆ ಇಲಾಖೆಯ ಅಗತ್ಯಗಳಿಗೆ ಸ್ಪಂದನೆ ಅವರಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಕಂಡು ಸಹಾಯಕರ ನೇಮಕಕ್ಕೆ ಇಲಾಖೆ ಮುಂದಾಗಿದೆ.
ಅರ್ಜಿ ಆಹ್ವಾನ (ಇಂಗ್ಲಿಷ್ ಫಾಂಟ್ ಇದೆ)
ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವ ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ(ಎಟಿವಿಎಂ) ಬಳಕೆಗೆ ಪ್ರಯಾಣಿಕರಿಗೆ ನೆರವಾಗುವ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಡಿಡಿ.ಠ್ಟ.ಜ್ಞಿಜಿಚ್ಞ್ಟಜ್ಝಿಡಿ.ಜಟ.ಜ್ಞಿ ನಲ್ಲಿ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. 2024, ಮೇ 24 ಸಂಜೆ 3ರ ಒಳಗೆ ಅರ್ಜಿ ಸಲ್ಲಿಸಬೇಕು. 18 ವರ್ಷ ಮೇಲ್ಪಟ್ಟವರು ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು.
ವರ್ಷದ ಒಪ್ಪಂದ
ಸಹಾಯಕರಾಗಿ ನೇಮಕಗೊಳ್ಳುವವರು ಸರ್ಕಾರದ ಸಿಬ್ಬಂದಿಯಾಗಿರುವುದಿಲ್ಲ. ನಿರ್ದಿಷ್ಟ ಉದ್ದೇಶಕ್ಕಾಗಿ ಇಲಾಖೆಯು ಸಹಾಯಕರಾಗಿ ನೇಮಕಗೊಳ್ಳುವವರ ನಡುವೆ ಒಂದು ವರ್ಷದ ಒಪ್ಪಂದ ಮಾಡಿಕೊಳ್ಳುವುದು. ಈ ಒಪ್ಪಂದದ ನವೀಕರಣ ರೈಲ್ವೆ ಸಚಿವಾಲಯದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಟಿಕೆಟ್ ವಿತರಣೆ ಸಂದರ್ಭ ಸ್ಮಾರ್ಟ್‌ಕಾರ್ಡ್‌ನಲ್ಲಿ ದೊರೆಯುವ ಬೋನಸ್ ಆಧರಿಸಿ ಸಹಾಯಕರು ಆದಾಯ ಪಡೆಯುವರು. ಪ್ರಸ್ತುತ ದಿನಂಪ್ರತಿ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 8 ಲಕ್ಷ ರೂ. ಹಾಗೂ ಮಂಗಳೂರು ಜಂಕ್ಷನ್‌ನಲ್ಲಿ 2 ಲಕ್ಷ ರೂ ಮೌಲ್ಯದ ಕಾಯ್ದಿರಿಸದ ಟಿಕೆಟ್ ವಿತರಣೆ ನಡೆಯುತ್ತಿದೆ.
…………
ರೈಲು ಸಾಮಾನ್ಯವಾಗಿ ಎಲ್ಲ ವರ್ಗದ ಪ್ರಯಾಣಿಕರು ಗರಿಷ್ಠ ಪ್ರಮಾಣದಲ್ಲಿ ಬಳಸುವ ಸಂಚಾರ ವ್ಯವಸ್ಥೆ. ಎಟಿವಿಎಂ ಯಂತ್ರ ಬಳಕೆ ಹೆಚ್ಚಿನ ಪ್ರಯಾಣಿಕರಿಗೆ ಕಷ್ಟ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಯಂತ್ರ ಬಳಕೆಗೆ ಸಹಾಯಕರ ನೇಮಕ ಸ್ವಾಗತಾರ್ಹ ಕ್ರಮ.