ಬೆಳೆ ಸಮೀಕ್ಷೆ ಮಾಡುವ ಪಿಆರ್‌ಒಗಳಿಗೆ ಸುರಕ್ಷಾ ಸೌಲಭ್ಯ ಒದಗಿಸುವಂತೆ ಪಿಆರ್‌ಒಗಳು ನಾಡಕಚೇರಿ ಉಪತಹಸೀಲ್ದಾರ್ ಮಲ್ಲಿಕಾರ್ಜುನ್‌ಗೆ ಮನವಿ ಸಲ್ಲಿಸಿದರು. ಕಾರ್ತಿಕ್, ಸಂಪತ್, ಗಿರೀಶ್, ಶಿವಪ್ಪ ಇದ್ದರು. 
ಜಿಲ್ಲೆ

ಪಿಆರ್‌ಒಗಳಿಗೆ ಸೌಲಭ್ಯ ಒದಗಿಸಿ

ಜಿ.ಹೆಚ್. ಧನ್ಯಕುಮಾರ್

ಬೀರೂರು: ಬೀರೂರು ಹೋಬಳಿ ಕಂದಾಯ ಇಲಾಖೆ ವ್ಯಾಪ್ತಿಯ ಬೆಳೆ ಸಮೀಕ್ಷೆಗಳ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತಿರುವ ಬೆಳೆ ಸಮೀಕ್ಷೆಗಾರರಿಗೆ ಸುರಕ್ಷಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬೆಳೆ ಸರ್ವೇ ಪಿಆರ್‌ಒಗಳು ಬೀರೂರು ನಾಡಕಚೇರಿ ಉಪತಹಸೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಪಿಆರ್‌ಒ ಬಾಲು ಮಾತನಾಡಿ, ಸರ್ಕಾರ ಹೀಗಾಗಲೇ ಒಂದು ಸರ್ವೇ ನಂ.ಗೆ ಕೇವಲ 10ರೂ. ನೀಡುತ್ತಿದೆ. ಅದನ್ನು 30 ರೂಗೆ ಹೆಚ್ಚಿಸಬೇಕು. ಕನಿಷ್ಟ ಗೌರವಧನ 10 ಸಾವಿರ ರೂ. ನೀಡಬೇಕು. ಗುರುತಿನ ಚೀಟಿ, ವಿಮಾಸೌಲಭ್ಯ, ಗುಣಮಟ್ಟದ ಮೊಬೈಲ್, ಪವರ್‌ಬ್ಯಾಂಕ್, ಜಿಪಿಎಸ್ ನಕ್ಷೆ ವ್ಯವಸ್ಥೆ ಮಾಡಿಕೊಡಬೇಕು. ಸಮೀಕ್ಷೆ ಸಮಯದಲ್ಲಿ ಅವಘಡ ಸಂಭವಿಸಿ ಮೃತಪಟ್ಟರೆ ಕನಿಷ್ಟ 5 ಲಕ್ಷ ರೂ.ಪರಿಹಾರ ನೀಡಬೇಕು ಮತ್ತು ಸುರಕ್ಷಾ ಸಾಧನಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಉಪ ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಇಲಾಖೆಗೆ ಬೆಳೆ ಸಮೀಕ್ಷೆಗಾರರಿಂದ ಸಾಕಷ್ಟು ಅನುಕೂಲವಾಗುತ್ತಿದೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಕಾರ್ತಿಕ್, ಸಂಪತ್, ಗಿರೀಶ್, ಶಿವಪ್ಪ ಇದ್ದರು.