ಬೀಳಗಿ ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ದೀಪದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಉದ್ಘಾಟಿಸಿದರು.ಪ್ರಾಚಾರ್ಯ ಬಿ.ಕೆ. ಜೋಡಿಗೇರ, ಎಸ್.ಡಿ. ಅರಷುಣಗಿ ಇತರರಿದ್ದಾರೆ. 
ಜಿಲ್ಲೆ

ಆನಂದದಿಂದ ಪರೀಕ್ಷೆ ಎದುರಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಬೀಳಗಿ: ಮಕ್ಕಳು ಪರೀಕ್ಷೆಗಳನ್ನು ಭಯದಿಂದಲ್ಲ ಆನಂದದಿಂದ ಬರೆಯಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.

ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ದೀಪದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ನಿರಂತರ ಅಧ್ಯಯನ ಮಾಡಬೇಕು ಎಂದರು.

ಪರೀಕ್ಷೆಗಳೆಂದರೆ ನಾವು ಕಲಿತ ಜ್ಞಾನವನ್ನು ಒರೆಗಲ್ಲಿಗೆ ಹಚ್ಚುವ ಸಾಧನಗಳೇ ಹೊರತು ಭಯಪಡಿಸುವ ಅಸ್ತ್ರಗಳಲ್ಲ. ಪರೀಕ್ಷೆಗಳಲ್ಲಿ ಸಿಸಿ ಕ್ಯಾಮರಾ, ವೆಬ್ ಕ್ಯಾಮರಾ ಬಳಸಲಾಗುತ್ತಿದೆ ಎಂದು ಭಯಭೀತರಾಗಿ ಪರೀಕ್ಷೆಯ ಕೊಠಡಿ ಪ್ರವೇಶಿಸದೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸದೊಂದಿಗೆ ಆನಂದದಿಂದ ಪ್ರವೇಶಿಸಬೇಕು. ಪರೀಕ್ಷೆಯ 3 ಗಂಟೆ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆದು ಹೊರಬರಬೇಕು ಎಂದರು.

ಪ್ರಾಚಾರ್ಯ ಎಸ್.ಡಿ. ಅರಷುಣಗಿ ಮಾತನಾಡಿ, ಓದಿದ್ದನ್ನು ಮನನ ಮಾಡಿಕೊಂಡು, ಪ್ರಶ್ನೆ ಸರಿಯಾಗಿ ಅರ್ಥೈಸಿಕೊಂಡು ಉತ್ತರಗಳನ್ನು ಧೈರ್ಯದಿಂದ ಬರೆಯಬೇಕು. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದರು.

ಪ್ರಾಚಾರ್ಯ ಬಿ.ಕೆ. ಜೋಡಿಗೇರ ಮತಾನಾಡಿದರು. ನಿಲಯ ಪಾಲಕರ ಎನ್. ಆರ್.ಹುದ್ದಾರ, ವಿ.ಡಿ. ಗನಾತೆ, ಕೆ.ಆರ್. ಜೋಶಿ, ಎಸ್.ಟಿ. ಕರಿಗಾರ, ಎಚ್.ವೈ. ಹಂಚಿನಾಳ, ಬಿ.ಕೆ. ಭೂಸರಡ್ಡಿ, ಆರ್.ಎಸ್. ಕಂಬಾರ, ಪಿ.ಎಸ್. ಕಂಬಾರ, ಎಂ. ಆರ್. ಅದವಾನಿ ಇದ್ದರು.