ದೊಡ್ಡಬಳ್ಳಾಪುರ; ವಿದ್ಯಾರ್ಥಿಗಳು ಭಯ ಬಿಟ್ಟು, ಪೂರ್ವತಯಾರಿ ಹಾಗೂ ಆತ್ಮವಿಶ್ವಾಸದಿಂದ ಪರೀೆಯನ್ನು ಎದುರಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಖ್ಯಾತ ಶಿಕ್ಷಣ ತ ಗುರುರಾಜ ಕರ್ಜಗಿ ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ದೇವರಾಜ ಅರಸು ವಿದ್ಯಾಸಂಸ್ಥೆಯ ಆರ್.ಎಲ್.ಜಾಲಪ್ಪ ಕಲಾಮಂದಿರದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉತ್ತೇಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೀೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದಿದ್ದಾಗ ಭಯ ಬೀಳುವುದು ಸಾಮಾನ್ಯ. ಪರೀೆಗಳ ಭಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು, ಓದಿದ್ದನ್ನು ಮರೆತು, ಅನುತ್ತೀರ್ಣರಾಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಪರೀೆಗಾಗಿ ನಿಯಮಿತವಾಗಿ ಓದುವ ಅಭ್ಯಾಸ ಕ್ರಮವನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಜಾವ ಓದುವುದು ಉತ್ತಮ ಅಭ್ಯಾಸವಾಗಿದ್ದು, 45 ನಿಮಿಷ ಓದಿ, ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಓದಿದ್ದನ್ನು ಒಂದು ಬಾರಿ ಬರೆಯಬೇಕು. ಇನ್ನೂ ಮನನವಾಗದಿದ್ದರೆ ಮತ್ತೊಬ್ಬರಿಗೆ ಹೇಳಬೇಕು. ಅಧ್ಯಾಯವಾರುಪಟ್ಟಿ ಮಾಡಿಕೊಂಡು ಓದಬೇಕು ಎಂದರು. ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಆಂಜಿನಪ್ಪ, ಶಿಕ್ಷಣ ಸಂಯೋಜಕರಾದ ಜಯಶ್ರೀ, ಮೈಲಾರಪ್ಪ, ಅಶ್ವಿನಿ, ಭೀಮರಾಜ್ ಇದ್ದರು.
21ರಿಂದ ಎಕ್ಸಾಂ; ಕ್ಷೇತ್ರ ಶಿಕ್ಷಣಾಕಾರಿ ಸೈಯೀದಾ ಅನೀಸ್ ಮಾತನಾಡಿ, ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಅಂಜಿಕೆಯಿಲ್ಲದೇ ಪರೀೆಗೆ ಸಜ್ಜಾಗಬೇಕು. ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಶಿಕ್ಷಣ ತಜ್ಞರ ಮಾತುಗಳು ಸ್ಫೂರ್ತಿಯಾಗಲಿವೆ ಎಂದರು.
ಒತ್ತಡಕ್ಕೆ ಒಳಗಾಗದಿರಿ; ಪರೀೆ ವೇಳೆಯಲ್ಲಿ ನಿದ್ದೆಗೆಟ್ಟು ಓದಿ ಹೆಚ್ಚು ಒತ್ತಡಕ್ಕೊಳಗಾಗಬಾರದು. ಲವಲವಿಕೆಯಿಂದ ಪರೀೆ ಕೆಂದ್ರಕ್ಕೆ ಹೋಗಬೇಕು. ಹೋಗುವ ಮುನ್ನ ತಾಯಿ, ತಂದೆಯ ಆಶೀರ್ವಾದ ಪಡೆದರೆ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚುತ್ತದೆ. ಇನ್ನು ಪರೀಾ ಕೇಂದ್ರದಲ್ಲಿ ಓದಿನ ಬಗ್ಗೆ ಅನವಶ್ಯಕವಾಗಿ ಗೆಳೆಯರ ಜತೆ ಚರ್ಚೆ ಮಾಡುವುದು ಬೇಡ. ಪರೀಾ ನಂತರವೂ ಬರೆದ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದಿನ ವಿಷಯಕ್ಕೆ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಪರೀೆ ಹಾಗೂ ಓದುವ ಕ್ರಮಗಳ ಕುರಿತು ಗುರುರಾಜ ಕರ್ಜಗಿ ಮಾಹಿತಿ ನೀಡಿದರು.
ಜ್ಞಾನಕ್ಕಾಗಿ ಓದಿ:' ಪರೀೆಗಾಗಿ ಓದುವುದು, ಅಂಕ ಗಳಿಸು ವುದಷ್ಟೇ ಶಿಕ್ಷಣದ ಉದ್ದೇಶವಲ್ಲ.ನಾವು ಪರೀೆಗಾಗಿ ಕಲಿತ ವಿದ್ಯೆ ಬಹಳಷ್ಟು ಕಾಲ ನಿಲ್ಲುವುದಿಲ್ಲ. ಹೃದಯಕ್ಕೆ ನಾಟಿದ ವಿಚಾರಗಳು ಬಹುಕಾಲ ನಿಲ್ಲುತ್ತವೆ. ಬಾಯಿಪಾಠ ಮಾಡಿಕೊಂಡು ಅರ್ಥ ಮಾಡಿಕೊಳ್ಳದೇ ಯಾವುದೇ ವಿಚಾರ ಕಲಿತರೂ ಅದು ಅಂಕಕ್ಕೆ ಸೀಮಿತವೇ ಹೊರತು ನಮಗೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಕಳೆದು ಹೋದ ಸಮಯ ಬದುಕಲ್ಲಿ ಮತ್ತೆ ಬರುವುದಿಲ್ಲ. ಮಾಜಿ ರಾಷ್ಟ್ರಪತಿಗಳಾದ ಕೆ.ಆರ್.ನಾರಾಯಣನ್, ಅಬ್ದುಲ್ ಕಲಾಂ ಅವರಂತಹ ಮಹನೀಯರ ಸಾಧನೆಗಳು ಸ್ಫೂರ್ತಿಯಾಗಬೇಕು ಎಂದು ಗುರುರಾಜ ಕರ್ಜಗಿ ಕಿವಿ ಮಾತು ಹೇಳಿದರು.
ಆರೋಗ್ಯದತ್ತ ಗಮನವಿರಲಿ
ಪರೀೆಗಾಗಿ ಓದುವುದಕ್ಕಿಂತ ನಿಯಮಿತವಾಗಿ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದ್ದು, ಇದಕ್ಕೆ ನಮ್ಮ ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಅಗತ್ಯ. ಮಿದುಳಿಗೆ ಆಮ್ಲಜನಕದ ಸರಬರಾಜು ಇಲ್ಲದಿದ್ದರೆ, ಗ್ರಹಿಸುವ ಶಕ್ತಿಯನ್ನು ಮಿದುಳು ಕಳೆದುಕೊಳ್ಳುತ್ತದೆ. ಇದಕ್ಕಾಗಿ ನಿತ್ಯ 10 ನಿಮಿಷ ಸಣ್ಣ ಆಕ್ಯೂಪ್ರೆಷರ್ ವ್ಯಾಯಾಮ ಮಾಡಬೇಕು ಎಂದು ಗುರುರಾಜ ಕರ್ಜಗಿ ಹೇಳಿದರು.