ಗುತ್ತಲ: ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಇರಲಿ ಅದನ್ನು ಆತ್ಮ ವಿಶ್ವಾಸದಿಂದ ಎದುರಿಸಲು ತಯಾರಾಗಬೇಕು ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಪಟ್ಟಣದ ಜಿಜಿಇ ಸೊಸೈಟಿಯ ಎಸ್ಆರ್ಎಸ್ ಹೈಸ್ಕೂಲ್ ಹಾಗೂ ಕಾಲೇಜ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುತ್ತಲ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸರ್ಕಾರ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳನ್ನು ಎಲ್ಲ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಜಿಇ ಸೊಸೈಟಿ ಗೌರವ ಕಾರ್ಯದರ್ಶಿ ಸಿ.ಬಿ. ಕುರವತ್ತಿಗೌಡರ ಮಾತನಾಡಿ, ಸರ್ಕಾರಿ ಶಾಲಾ- ಕಾಲೇಜ್ನಂತೆ ನಮ್ಮ ಸಂಸ್ಥೆಯು ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಸಭಾಭವನದ ಅವಶ್ಯಕತೆ ಇದ್ದು, ರುದ್ರಪ್ಪ ಲಮಾಣಿ ಅವರು ತಮ್ಮ ಅನುದಾನದಲ್ಲಿ ಸಭಾಭವನ ನಿರ್ವಿುಸಿಕೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಜಿಇ ಸೊಸೈಟಿ ಅಧ್ಯಕ್ಷ ಆರ್.ಎಸ್. ಮನ್ನಂಗಿ, ಉಪಾಧ್ಯಕ್ಷ ಪ್ರಕಾಶ ಚಕ್ಕಿ, ನಿರ್ದೇಶಕರಾದ ಐಯಣ್ಣ ಹರಿಹರ, ಪಿ.ಎಂ. ಕೋವಳ್ಳಿಮಠ, ಸಂಗಯ್ಯಸ್ವಾಮಿ ಭೂಸನೂರಮಠ, ಬಸವರಾಜ ಎಲಿಗಾರ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪ.ಪಂ. ಸದಸ್ಯರಾದ ಪ್ರದೀಪ ಸಾಲಗೇರಿ, ಭರಮಣ್ಣ ಹಾದಿಮನಿ, ಅಜಯ ಬಂಡಿವಡ್ಡರ, ಬಸಣ್ಣ ನೆಗಳೂರ, ಮಹ್ಮದಹನೀಫ ರಿತ್ತಿ, ಖಲೀಲಹ್ಮದ ಖಾಜಿ, ಪ್ರಾಚಾರ್ಯ ಮಹಾಂತ ಕುರವತ್ತಿಗೌಡರ, ಉಪನ್ಯಾಸಕರಾದ, ಇಂದಿರಾ ತೇಲ್ಕರ್, ಬಿ.ಎಚ್. ಲಮಾಣಿ, ಮುಖ್ಯ ಶಿಕ್ಷಕ ಬಿ.ಎನ್. ಗಟ್ಟಿಮನಿ, ನಾಗರಾಜ ಕಾಯಕದ, ಶರಣಪ್ಪ ಇಟಗಿ, ಎಂ.ಡಿ. ಮಡಿವಾಳರ, ಎಂ.ಎನ್. ಅಜ್ಜಿವಡಿಯರಮಠ ಇದ್ದರು.
ಮುಖ್ಯ ಶಿಕ್ಷಕ ಬಿ.ಎನ್. ಗಟ್ಟಿಮನಿ ಸ್ವಾಗತಿಸಿದರು. ಆರ್.ವೈ. ಪಾಟೀಲ್ ಹಾಗೂ ಶಿವಕುಮಾರ ಸಾರಥಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಡಾ. ಪಾರ್ವತಿ ದೊಡ್ಡಮನಿ ವಂದಿಸಿದರು.