ಜಿಲ್ಲೆ

ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿ ಕೊಡುಗೆ ಅಪಾರ

ಮುಂಡರಗಿ: ಫ.ಗು. ಹಳಕಟ್ಟಿ ಅವರು ಬಸವಾದಿ ಶರಣರ ವಚನಗಳ ಸಂರಕ್ಷಣೆಗಾಗಿ ಸಾಕಷ್ಟು ಶ್ರಮ ವಹಿಸಿದರು. ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದಾನೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಫ.ಗು.ಹಳಕಟ್ಟಿ. ಅವರು ನಾಡಿನ ವಚನ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಪೊ›.ಆರ್.ಎಲ್. ಪೊಲೀಸಪಾಟೀಲ ಹೇಳಿದರು.

ತಾಲೂಕಿನ ಮೇವುಂಡಿ ಗ್ರಾಮದ ಎಸ್.ಎಂ. ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ಹಾಗೂ ಎಸ್.ಎಂ.ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳ ಮೂಲಕ ಹಳಕಟ್ಟಿ ಅವರಂಥ ಮಹಾನ್ ಸಾಧಕರ ಕುರಿತು ಮಕ್ಕಳಿಗೆ ತಿಳಿಸುವುದು ಶ್ಲಾಘನೀಯ. ಜನ್ಮದಿನಾಚರಣೆ ಕೇವಲ ಪ್ರತಿಷ್ಠೆಗಾಗಿ ಹೆಸರಿಗಾಗಿ ಮಾಡದೆ ನಾಡಿನ ಪ್ರಗತಿಗಾಗಿ ಶ್ರಮಿಸಿದವರು ನಡೆದು ಬಂದಂತ ದಾರಿಯನ್ನು ಅವಲೋಕನ ಮಾಡುವುದೆ ನಿಜವಾದ ಜನ್ಮದಿನಾಚರಣೆಯಾಗಿದೆ. ಫ.ಗು. ಹಳಕಟ್ಟಿಯವರು ಅಂದಾಜು 250 ವಚನಕಾರರ ವಚನಗಳನ್ನು, 900 ಪುಟಗಳ 75 ಗ್ರಂಥಗಳ ಬಿಡುಗಡೆ ಮಾಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಮಕ್ಕಳು ಕನ್ನಡ ಭಾಷೆ ಹಾಗೂ ಬರಹದ ಮೇಲೆ ಬಹಳ ಗಮನ ಹರಿಸಬೇಕು. ಕನ್ನಡ ಅಂಕಿಗಳ ಬಳಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಭೂ ದಾನಿ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗಾಗಿ ತಾಲೂಕಿನಾದ್ಯಂತ ಕಸಾಪ ಕಾರ್ಯಕ್ರಮಗಳು ಚಟುವಟಿಕೆಗಳು ಮಾಡುತ್ತ ಬರುತ್ತಿರುವುದು ಶ್ಲಾಘನೀಯ. ಭೂಮಿ ತಾಯಿ, ಜನ್ಮ ನೀಡಿದ ತಾಯಿ, ಭಾಷೆ ಈ ಮೂರನ್ನು ಮರೆಯಬಾರದು ಎಂದರು.

ಬಿಜೆಪಿ ಡಂಬಳ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ, ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಫ್. ಪಾಟೀಲ, ಎಸ್​ಡಿಎಂಸಿ ಅಧ್ಯಕ್ಷ ರವಿ ಮೇಟಿ, ಸದಸ್ಯರಾದ ಮೌನೇಶ ಕಮ್ಮಾರ, ಕೊಟ್ರಪ್ಪ ಬ್ಯಾಳಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಕೃಷ್ಣಮೂರ್ತಿ ಸಾವುಕಾರ, ರವಿಗೌಡ ಪಾಟೀಲ, ಲಮಾಣಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಕಸಾಪ ಪ್ರ.ಕಾರ್ಯದರ್ಶಿ ಮಂಜುನಾಥ ಮುಧೋಳ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಯುವರಾಜ ಮುಂಡರಗಿ ಸ್ವಾಗತಿಸಿದರು. ಪ್ರೌಢಶಾಲಾ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಮಂಜುನಾಥ ಲಮಾಣಿ ನಿರೂಪಿಸಿದರು. ಕಸಾಪ ಸದಸ್ಯ ಸಿ.ಕೆ.ಗಣಪ್ಪನವರ ವಂದಿಸಿದರು.