ಬೆಂಗಳೂರಿನ ಲಯನ್ಸ್ ವೆಸ್ಟ್ ಆಸ್ಪತ್ರೆ ತಜ್ಞೆ ಡಾ.ನಯನಾ ಸಲಹೆ
ಉಚಿತ ತಪಾಸಣೆ ಶಿಬಿರ
ಕೊಳ್ಳೇಗಾಲ : ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ದೇಶಿಸಿ ಮಾತನಾಡಿದ ಬೆಂಗಳೂರಿನ ಲಯನ್ಸ್ ವೆಸ್ಟ್ ಆಸ್ಪತ್ರೆಯ ವ್ಯೆದ್ಯೆ ಡಾ.ನಯನಾ,
ದೇಹದಲ್ಲಿ ಕಣ್ಣು ಪ್ರಧಾನ ಅಂಗ. ಕಣ್ಣಿನ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ದಿನಕ್ಕೆ ಎರಡು- ಮೂರು ಬಾರಿ ಎರಡೂ ನೇತ್ರಗಳನ್ನು ಸ್ವಚ್ಛ ನೀರಿನಿಂದ ಶುಚಿಗೊಳಿಸಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಸ್. ನಾಗರಾಜು ಕೊಂಗರಹಳ್ಳಿ ಮಾತನಾಡಿ, ಸಂಸ್ಥೆ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದೆ. ಇದರಿಂದ ಜನರಿಗೆ ವ್ಯೆದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕುತ್ತಿದೆ. ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ದೇಹದ ವಿವಿಧ ಅಂಗಾಂಗಗಳಿಂತ ಕಣ್ಣು ಬಹಳ ಸೂಕ್ಷ್ಮ ಮತ್ತು ಪವಿತ್ರ ಅಂಗ. ಆದ್ದರಿಂದ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರ ಆರೋಗ್ಯ ಪಾಲನೆ ದೃಷ್ಟಿಯಿಂದ ಸಂಸ್ಥೆಯು ನೇತ್ರ ತಪಾಸಣೆ ಶಿಬಿರ ನಡೆಸುತ್ತದೆ. ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಮುಂಬರುವ ದಿನಗಳಲ್ಲೂ ಶಿಬಿರಗಳು ನಡೆಯಲಿದ್ದು ನೇತ್ರ ದೋಷ ಇದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಶಸ್ತ್ರ ಚಿಕಿತ್ಸೆಗೆ 52 ಜನ ಆಯ್ಕೆ :
ಇದೇ ಸಂದರ್ಭ ಶಿಬಿರದಲ್ಲಿ 62 ಜನರು ನೇತ್ರ ಚಿಕಿತ್ಸೆ ಸೌಲಭ್ಯ ಪಡೆದುಕೊಂಡರು. ಇದರಲ್ಲಿ 52 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ವೈದ್ಯರ ದಿನಾಚರಣೆ ಅಂಗವಾಗಿ ಲಯನ್ಸ್ ವೆಸ್ಟ್ ಆಸ್ಪತ್ರೆ ತಜ್ಞ ಡಾ.ಆಯುಷ್ ಅವರನ್ನು ಸಂಸ್ಥೆ ಪದಾಧಿಕಾರಿಗಳು ಗೌರವಿಸಿದರು. ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಚಿಕ್ಕಬಸವಯ್ಯ, ಮಾಜಿ ಅಧ್ಯಕ್ಷರಾದ ಚನ್ನಮಾದೇಗೌಡ, ಆನಂದರಾಮ ಶೆಟ್ಟಿ, ಜಯಪ್ರಕಾಶ ನಾರಾಯಣ, ಜಂಟಿ ಕಾರ್ಯದರ್ಶಿ ಚೇತನ್ ಮತ್ತಿತರಿದ್ದರು.