ಜಿಲ್ಲೆ

ನೇತ್ರ ತಪಾಸಣೆ ಸದುಪಯೋಗವಾಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಪಟ್ಟಣದ ಸರ್ಕಾರಿ ನಿವತ್ತ ನೌಕರರ ಸಂಘವು ಡಾ. ಪಟವರ್ಧನ ನಂದಾದೀಪ ನೇತ್ರಾಲಯ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಗುರುವಾರ ಉಚಿತ ಪ್ರಾಥಮಿಕ ನೇತ್ರ ತಪಾಸಣೆ ನಡೆಸಿತು.

ನೌಕರ ಸಂಘದ ಅಧ್ಯಕ್ಷ ಬಿ.ಎಸ್. ತೇಗೂರ, ಕಾರ್ಯದರ್ಶಿ ಎಚ್. ಬಿ. ಸುಂಕದ ಮಾತನಾಡಿ, ತಂದೆ, ತಾಯಿಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದರು.

ನೇತ್ರಾಲಯದ ಸಂಚಾಲಕ ಆನಂದ ತುಪ್ಪದ ಮಾತನಾಡಿ, 55 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೇತ್ರ ತಪಾಸಣೆಯು ಮಾ.31ರ ವರೆಗೆ ನಂದಾದೀಪ ನೇತ್ರಾಲಯದಲ್ಲಿ ಮುಂದುವರಿಯಲಿದೆ ಎಂದರು. ಡಾ. ಜೋಷಾ ಪಾಟೀಲ, ಶಿವಶರಣ ಬೆಟ್ಟದ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.