ಕೊಕ್ಕರ್ಣೆ: ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆ.ಎಂ.ಉಡುಪ ಟ್ರಸ್ಟ್ ಮಂದಾರ್ತಿ ಪ್ರಾಯೋಜಕತ್ವದಲ್ಲಿ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು.
ಕೆ.ಎಂ.ಉಡುಪ ಟ್ರಸ್ಟ್ ಮುಖ್ಯಸ್ಥ ಮಹೇಶ ಉಡುಪ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಎಸ್. ಪ್ರಸ್ತಾವಿಸಿದರು. ಕಣ್ಣಿನ ಆಸ್ಪತ್ರೆಯ ಶಂಕರ ಶೆಟ್ಟಿ, ನೇತ್ರ ತಜ್ಞ ಡಾ.ಅಭಿನಯ ಅಶೋಕ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಅಂಧತ್ವ ನಿವಾರಣಾ ವಿಭಾಗ, ಹೆಗ್ಗುಂಜೆ, ಕಾಡೂರು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಅನುಪಮಾ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ರಕ್ಷಿತ್ ಎಚ್.ಬಿ. ವಂದಿಸಿದರು.