ಜಿಲ್ಲೆ

ಮಕ್ಕಳ ಕಣ್ಣಿನ ಆರೋಗ್ಯದ ಕಾಳಜಿ ಅಗತ್ಯ..

ಪ್ರಶಾಂತ ಜಿ. ಭಾಗ್ವತ

ಸಂಚಾಲಕ ಕೆ.ಅಣ್ಣಪ್ಪ ಶೆಣೈ ಸಲಹೆ

ನೇತ್ರ ತಪಾಸಣಾ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಬಗ್ಗೆ ಹಾಗೂ ಕಣ್ಣಿನಲ್ಲಿರುವ ದೋಷಗಳ ಬಗ್ಗೆ ಸರಿಯಾದ ಅರಿವು ಹೊಂದಿರಬೇಕು. ಅಲ್ಲದೆ, ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಂದ್ರಾಳಿ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಸಲಹೆ ನೀಡಿದರು.

ಉಡುಪಿಯ ಇಂದ್ರಾಳಿಯಲ್ಲಿರುವ ಇಂದ್ರಾಳಿ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್​ ಲಿಮಿಟೆಡ್​, ಕಾರ್ಪೊರೇಟ್ ಸಮಾಜಿಕ್​ ದಾಯತ್ವ, ಜಿಲ್ಲಾ ಆರೋಗ್ಯ ಕೇಂದ್ರ, ಕೆಎಂಸಿ ಮಣಿಪಾಲ ಹಾಗೂ ಪ್ರಸಾದ್​ ನೇತ್ರಾಲಯದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅತ್ಯಂತ ಪ್ರಮುಖ ಅಂಗ

ಐಎಂಎ ಕರಾವಳಿ ಉಡುಪಿಯ ಅಧ್ಯಕ್ಷ ಡಾ. ಸುರೇಶ್​ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳ ಕಣ್ಣಿನಲ್ಲಿ ಅನೇಕ ತೊಂದರೆಗಳು ಕಂಡು ಬರುತ್ತಿವೆ. ಕಣ್ಣು ಅತ್ಯಂತ ಪ್ರಮುಖವಾದ ಅಂಗವಾಗಿದೆ. ಇತ್ತೀಚೆಗೆ ಮೊಬೈಲ್​ ಬಳಕೆ ಹೆಚ್ಚಾಗುತ್ತಿರುವುದರಿಂದಲೂ ಸಹ ಮಕ್ಕಳಲ್ಲಿ ಬಹುಬೇಗ ದೃಷ್ಟಿದೋಷ ಕಾಣಿಸುತ್ತಿದೆ ಎಂದರು.

ಕೊಂಕಣ ರೈಲ್ವೆಯ ವೈದ್ಯಕೀಯ ಅಧಿಕಾರಿ ಡಾ. ಸ್ಪೀವನ್​ ಜಾರ್ಜ್​, ಪ್ರಸಾದ್​ ನೇತ್ರಾಲಯದ ಡಾ. ತಾನ್ಯಾ, ಡಾ. ಕ್ರೀನಾ. ಡಾ. ಸ್ನೇಹಾ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕೆ.ರತ್ನಾಕರ್​ ಶೆಣೈ, ವಿದ್ಯಾ ಅಮರ್​ ಪೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ್​ ಕಿಣಿ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಪ್ರಭು, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಚಿತಾ ಪ್ರಭು ಸ್ವಾಗತಿಸಿದರು. ಅಭಯ್​ ತಂತ್ರಿ ವಂದಿಸಿದರು. ಶೀರ್ಷಿಕಾ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು.