ಜಿಲ್ಲೆ

ಕಣ್ಣುಗಳ ಕಾಳಜಿ ಅತ್ಯಗತ್ಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾನವನ ಅತ್ಯಮೂಲ್ಯ ಅಂಗಗಳಲ್ಲಿ ಕಣ್ಣು ಪ್ರಧಾನ. ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ಹು-ಧಾ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಹೇಳಿದರು.

ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿಯಿಂದ ಹಾಗೂ ಎಂ.ಎ0. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ನಗರದ ಪರಿಸರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸಕಾಲಕ್ಕೆ ಆಸ್ಪತ್ರೆಗೆ ಹೋಗಿ ಕಣ್ಣು ಪರೀಕ್ಷೆ ಮಾಡಿಸಲು ಸಾಧ್ಯವಾಗುವುದಿಲ್ಲ. ಡಾ. ಎಂ.ಎ0. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಉಚಿತ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ, ಸಹ ಕಾರ್ಯದರ್ಶಿ ಕೆ.ಎಚ್. ನಾಯಕ, ಕೋಶಾಧ್ಯಕ್ಷ ಐ.ಎಲ್. ಪಾಟೀಲ, ವಕೀಲ ಶಿವಾನಂದ ಭಾವಿಕಟ್ಟಿ, ಸತೀಶ ಶಿರೂರ, ಅನಿಲ ಮೇತ್ರಿ, ಸ್ನೇಹಲ್ ಬಿರಾದಾರ, ಐಶ್ವರ್ಯಾ ಗಿರಿಜಮ್ಮನವರ, ರಿಝಿವಾನಾ ಪಠಾಣ, ಪದ್ಮಜಾ ಶೀಗೀಹಳ್ಳಿ, ಸಂದ್ಯಾ ಅಂಬಡಗಟ್ಟಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಸುಲೋಚನಾ ಇರೊಜಿ, ಇತರರಿದ್ದರು. ಶಿಬಿರದಲ್ಲಿ ಸುಮಾರು 100 ಜನರ ಕಣ್ಣಿನ ತಪಾಸಣೆ ಮಾಡಲಾಯಿತು.