ಜಿಲ್ಲೆ

ನೂರಾರು ಜನರಿಗೆ ಕಣ್ಣಿನ ತಪಾಸಣೆ

Mysuru - Desk - Naveen Kumar H P

ಶನಿವಾರಸಂತೆ : ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಿಗೇರಿ ಗ್ರಾಮದ ದಿ.ಹೊನ್ನಮ್ಮ, ತಮ್ಮೇಗೌಡ ಅವರ ಸ್ಮರಣಾರ್ಥವಾಗಿ ಅವರ ಪುತ್ರ ಕೆ.ಟಿ.ಹರೀಶ್ ಮತ್ತು ಪತ್ನಿ ಮನು ದಂಪತಿ ಹಾಗೂ ಉತ್ತರ ಪ್ರದೇಶದ ವಿಷನ್ ಸ್ಪ್ರಿಂಗ್ ಸಂಸ್ಥೆಯ ಸಹ ಭಾಗಿತ್ದದಲ್ಲಿ ಗುರುವಾರ ದುಂಡಳ್ಳಿ ಕೃಷಿ ಇಲಾಖೆ ಸಭಾಂಗಣದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಿಬಿರದ ಪ್ರಾಯೋಜಕ ಕೆ.ಟಿ.ಹರೀಶ್ ಮಾತನಾಡಿ, ಮನುಷ್ಯನ ಶರೀರದಲ್ಲಿ ಕಣ್ಣು ಪ್ರಮುಖವಾದ ಆಂಗವಾಗಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಸಮಯಕ್ಕೆ ಅನುಗುಣವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎಂದರು.

ಉತ್ತರ ಪ್ರದೇಶದ ವಿಷನ್ ಸ್ಪ್ರಿಂಗ್ ಸಂಸ್ಥೆಯ ನೇತ್ರ ವೈದ್ಯಾಧಿಕಾರಿ ಡಾ.ಜಾಬೀರ್ ಖಾನ್ ನೇತೃತ್ವದಲ್ಲಿ ವೈದ್ಯರ ತಂಡ ರೋಗಿಗಳ ಕಣ್ಣಿನ ಆರೋಗ್ಯ ತಪಾಸಣೆ ನಡೆಸಿದರು. ಕಣ್ಣಿಗೆ ಕನ್ನಡಕದ ಅವಶ್ಯಕತೆ ಇದ್ದ ರೋಗಿಗಳಿಗೆ ಬೆಲೆ ಬಾಳುವ ಕನ್ನಡಕವನ್ನು 80 ರೂ. ಗೆ ವಿತರಣೆ ಮಾಡಲಾಯಿತು. ಶಿಬಿರದಲ್ಲಿ 150 ಜನರು ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.