ಬೇತು ಗ್ರಾಮದಲ್ಲಿರುವ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು. 
ಜಿಲ್ಲೆ

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ಅಭಿನಯ್ ಎಚ್.ಎಂ

ನಾಪೋಕ್ಲು: ಸಮೀಪದ ಬೇತು ಗ್ರಾಮದಲ್ಲಿರುವ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ನೇತಾಜಿ ಶಾಲೆ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ, ನಿರ್ದೇಶಕರಾದ ಶರತ್, ಭವ್ಯಾ ಹಾಗೂ ಶಾಲೆ ಮುಖ್ಯಶಿಕ್ಷಕ ಚೋಕಿರ ತಮಯ್ಯ, ಸಹ ಶಿಕ್ಷಕಿ ನೇತ್ರಾವತಿ, ಶಿಕ್ಷಕಿಯರಾದ ರಶ್ಮಿ, ತನು ಇತರರಿದ್ದರು.

ಸೋಲಾರ್ ಸಿಸ್ಟಮ್, ಟ್ರಾನ್ಸ್‌ಪೊಟೇಷನ್ ಮಾಡೆಲ್, ಫುಡ್ ನ್ಯೂಟ್ರಿಷನ್, ಎಕೋ ಸಿಸ್ಟಮ್, ನ್ಯೂರಾನ್, ಸ್ಕಾ್ರೃಟ್ರಿಂಗ್ ಆಫ್ ಲೈಟ್, ಹ್ಯಾಬಿಟೇಡ್ಸ್ ವಿಜ್ಞಾನ ಪ್ರಯೋಗಗಳು ಸೇರಿದಂತೆ ಹಲವು ವೈಜ್ಞಾನಿಕ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.