ಹುಬ್ಬಳ್ಳಿ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಯುನೈಟೆಡ್ ಸೆಕ್ಯೂರಿಟಿ ಫೋರ್ಸ್, ಕಿತ್ತೂರು ರಾಣಿ ಚನ್ನಮ್ಮ ಸೆಕ್ಯೂರಿಟಿ ಸವಿರ್ಸಸ್ ಪೆ. ಲಿಮಿಟೆಡ್ ಹಾಗೂ ವಿವೇಕಾನಂದ ಆಸ್ಪತ್ರೆ ವತಿಯಿಂದ ಇಲ್ಲಿಯ ವಿಶ್ವೇಶ್ವರನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಸುಮಾರು 200ಕ್ಕೂ ಹೆಚ್ಚು ಮಕ್ಕಳ ಕಣ್ಣು ತಪಾಸಣೆ ಮಾಡಿ ದೃಷ್ಟಿ ದೋಷ ಉಳ್ಳವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ನೇತ್ರ ತಜ್ಞೆ ಡಾ. ಲಕ್ಷಿ$್ಮ ಗುಮಾಸ್ತೆ ಶಿಬಿರದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಯುನೈಟೆಡ್ ಸೆಕ್ಯೂರಿಟಿ ಫೋರ್ಸ್ ಎಂಡಿ ಸಂತೋಷ್ ಇಂಚಲ್, ಬಡ, ಮಧ್ಯಮ ವರ್ಗದ ಮಕ್ಕಳಿಗೆ ಶಿಬಿರ ಅನುಕೂಲವಾದರೆ ಅದೇ ಸಂತೋಷದ ಸಂಗತಿ ಎಂದರು.
ಸಮಾಜ ಸೇವಕ ಸಂಜಯ ಇಂಚಲ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಅದ್ಭುತ ಸಾಧನೆ ಮಾಡುತ್ತಾರೆ. ಮಕ್ಕಳು ಕೀಳರಿಮೆ ಬಿಟ್ಟು ಸಾಧನೆಯ ಕಡೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯಾಧ್ಯಾಪಕಿ ಡಿ.ಜಿ. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಆಸ್ಪತ್ರೆ ವೈದ್ಯಕಿಯ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಇದ್ದರು.
ಶಿಕ್ಷಕರಾದ ಗೀತಾ ಕುಲಕಣಿರ್, ಎಸ್.ಜಿ. ಸೌದಾಗರ, ಎನ್.ಎಸ್. ಯಲಿಗಾರ ನಿರ್ವಹಿಸಿದರು.