ದೇವದುರ್ಗದಲ್ಲಿ ಆಯೋಜಿಸಿದ್ದ ವಿವಿಧ ವಿಷಯಗಳ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಪಿಐ ಎಸ್.ಮಂಜುನಾಥ ಚಾಲನೆ ನೀಡಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಭಾಶ್ಚಂದ್ರ ಪಾಟೀಲ್, ದೇವದುರ್ಗ ಸೈನಿಕ ತರಬೇತಿ ಅಕಾಡೆಮಿ ಸಂಚಾಲಕ ಪಂಪಣ್ಣ ಅಕ್ಕರಕಿ, ಯೋಗಶಿಕ್ಷಕ ವೆಂಕಟೇಶ ದೊರೆ ಇತರರಿದ್ದರು. 
ಜಿಲ್ಲೆ

ಪಠ್ಯೇತರ ಚಟುವಟಿಕೆಯಿಂದ ಕೌಶಲ ವೃದ್ಧಿ

ನರೇಶ್ ಕುಮಾರ್

ದೇವದುರ್ಗ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಕೌಶಲ ವೃದ್ಧಿಯಾಗಲಿದೆ ಎಂದು ಪಿಐ ಎಸ್.ಮಂಜುನಾಥ ಹೇಳಿದರು.

ಪಟ್ಟಣದ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿವಿಧ ವಿಷಯಗಳ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಪುಸ್ತಕದ ಹುಳುವಾಗದೆ ಸಾಮಾಜಿಕ ಜ್ಞಾನ ಪಡೆಯಬೇಕು. ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭಾ ಕಾರಂಜಿ, ಶಾಲಾ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಹಪಠ್ಯ ಚಟುವಟಿಕೆಯಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯುವ ಜತೆಗೆ ಪ್ರತಿಭೆ ಗುರುತಿಸಲು ಸಹಕಾರಿಯಾಗಲಿದೆ. ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂದು ತಿಳಿಸಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಭಾಶ್ಚಂದ್ರ ಪಾಟೀಲ್, ದೇವದುರ್ಗ ಸೈನಿಕ ತರಬೇತಿ ಅಕಾಡೆಮಿ ಸಂಚಾಲಕ ಪಂಪಣ್ಣ ಅಕ್ಕರಕಿ, ಯೋಗಶಿಕ್ಷಕ ವೆಂಕಟೇಶ ದೊರೆ, ಸಂಸ್ಥೆ ಕಾರ್ಯದರ್ಶಿ ಡಾ.ಅಮೃತಮತಿ ಪಾಟೀಲ್, ಹೃತಿಕ್, ರವಿಕುಮಾರ ಮರಡ್ಡಿ, ರೂಪಾ ಆರ್.ಮರಡ್ಡಿ ಇತರರಿದ್ದರು.