ಮಂಗಳೂರು : ಪ್ರಯಾಣಿಕರ ದಟ್ಟಣೆ ನಿವಾರಿಸಲು ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ (ನಂ.16604) ಮೇ 16ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಹಾಗೂ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ (ನಂ.16603)ರೈಲಿಗೆ ಮೇ 15ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಅಳವಡಿಸಲಾಗುವುದು. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ (ನಂ.16629) ಮೇ 15ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಅಳವಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.