ಜಿಲ್ಲೆ

2 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

Mangaluru - Hariprasad Rai



ಮಂಗಳೂರು : ಪ್ರಯಾಣಿಕರ ದಟ್ಟಣೆ ನಿವಾರಿಸಲು ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ.
ಹಿಸ್ಸಾರ್-ಕೊಯಮುತ್ತೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ ( ರೈಲು ನಂ.22475)ಗೆ ಜೂ.5ರಿಂದ 26ರವರೆಗೆ 2 ಟಯರ್ ಎಸಿ ಒಂದು ಕೋಚ್ ಹಾಗೂ ಕೊಯಮುತ್ತೂರು ಜಂಕ್ಷನ್ -ಹಿಸ್ಸಾರ್ ವೀಕ್ಲಿ ಎಕ್ಸ್‌ಪ್ರೆಸ್ ( ರೈಲು ನಂ.22476)ಗೆ ಜೂ.8ರಿಂದ 29ರವರೆಗೆ 3 ಟಯರ್ ಎಸಿ ಒಂದು ಕೋಚ್ ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.