ಮಂಗಳೂರು: ಮತ್ತೆ ಕರಾವಳಿಯಲ್ಲಿ ಭೂಗತಪಾತಕಿಗಳಿಂದ ಹಣಕ್ಕಾಗಿ ಬೆದರಿಕೆ ಕರೆ ಬರಲಾರಂಭಿಸಿದೆ.
ಮೂಲ್ಕಿಯ ಉದ್ಯಮಿ ಹಾಗೂ ಗುತ್ತಿಗೆದಾರರೊಬ್ಬರಿಗೆ ಭೂಗತ ಪಾತಕಿ ಕಲಿಯೋಗೀಶ್ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ. ಹಣ ಕೊಡದಿದ್ದರೆ ಜೀವ ತೆಗೆಯುವ ಬೆದರಿಕೆ ಒಡ್ಡಲಾಗಿದೆ.
ಈ ಕುರಿತು ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ವರ್ಷದ ಹಿಂದೆಯೂ ಈ ಉದ್ಯಮಿಗೆ ಬೆದರಿಕೆ ಕರೆ ಬಂದಿದ್ದು ಅಲ್ಲದೆ ಮನೆಗೆ ದುಷ್ಕರ್ಮಿಗಳು ನುಗ್ಗಿ ಗುಂಡು ಹಾರಿಸಿದ್ದರು. ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿತ್ತು.